ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಎರಡು ಸೆಪ್ಟಂಬರ್ ಸೋಮವಾರದಂದು ವಿದ್ಯಾರ್ಥಿಗಳು ವಿಶ್ವ ತೆಂಗು ದಿನಾಚರಣೆಯ ಪ್ರಯುಕ್ತ ಅದರ ಪ್ರಾಮುಖ್ಯತೆ ಮತ್ತು ಉದ್ದೇಶವನ್ನು ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ.ರೇಖಾ ಪ್ರಾಧ್ಯಾಪಕರು ತೋಟಗಾರಿಕೆ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಕಾರ್ಯಕ್ರಮದ ಕುರಿತು ತೆಂಗಿನಕಾಯಿಯು ಕಲ್ಪವೃಕ್ಷ, ಕಾಮಧೇನುವಾಗಿ ಕಾಣುತ್ತಾರೆ ಎಂದು ತಿಳಿಸಿದರು.

ಹಾಗೂ ತೆಂಗಿನಕಾಯಿಯ ಮಹತ್ವ ಮತ್ತು ಉಪಯೋಗಗಳ ಕುರಿತು ಹೇಳಿದರು.ಅದಲ್ಲದೆ ಈ ದಿನಾಚರಣೆಯ ಮುಖ್ಯ ಉದ್ದೇಶವನ್ನು ಕುರಿತು ಮಾತನಾಡಿದರು.

ಮತ್ತು ದಿನಾಚರಣೆಯ ಪ್ರಯುಕ್ತ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆ ಡಾ ಮಹೇಶ್ ವೈ ಎಸ್ ಸಹಾಯಕ ಪ್ರಾಧ್ಯಾಪಕರು(ಸಸ್ಯರೋಗಶಾಸ್ತ್ರ) ತೆಂಗಿನ ಸಸಿಗಳನ್ನು ನೀಡಿ ತೆಂಗಿನಕಾಯಿ ಬೆಳೆಸುವುದು ನಮ್ಮ ಜೀವನಕ್ಕೆ ಪ್ರಮುಖವಾಗಿದದ್ದು ಎಂಬುದು ಅವರ ಉದ್ದೇಶವಾಗಿದ್ದು ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿತು.

ಹಾಗೂ ನಿಸರ್ಗವು ತಾಯಿ ರೂಪ ಎಂಬಂತೆ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ತೆಂಗಿನ ಸಸಿಗಳನ್ನು ಡಾ.ರೇಖಾ ಅವರಿಂದ ವಿತರಿಸಲಾಯಿತು.

ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮನವರಿಕೆ ಮಾಡಿಕೊಳ್ಳಲಾಯಿತು.

ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ಮಾಡಿದ ಎಲ್ಲರಿಗೂ ವಂದಿಸುತ್ತ ಈ ಕಾರ್ಯಕ್ರಮವು ಯಶಸ್ವಿಯಾಗಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *