ಅರಣ್ಯ ಇಲಾಖೆ ಅವರು ರೈತರಿಗೆ ಒತ್ತುವರಿ ವಿಚಾರವಾಗಿ ಕಿರುಕುಳ ನಿಡುತ್ತಿರುವ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಪಶ್ಚಿಮ ಘಟ್ಟದ ಮೂಲ ನಿವಾಸಿಗಳ ಹೋರಾಟ ಸಮಿತಿಯ ಅಧ್ಯಕ್ಷರಾದ ಬಾಚಿಹಳ್ಳಿ ಪ್ರತಾಪ್ ಗೌಡರು ಮತ್ತು ಗೌರವ ಸಲಹೆಗಾರರಾದ ಎಚ್ ಎಂ ವಿಶ್ವನಾಥ್ ಮಾಜಿ ಶಾಸಕರು ಸಭೆಯನ್ನು ನಡೆಸಿ, ಮುಂದೆ ಕೈಗೆತ್ತುಕೊಳ್ಳಬೇಕಾದ ಕೆಲಸಗಳ ಚರ್ಚೆ ನಡೆಸಿದರು

ಈ ಬಗ್ಗೆ ಸಮಿತಿಯ ಕಚೇರಿ, ಸಮಿತಿಯ ಹೆಸರನ್ನು ನೋಂದಣಿ ಮಾಡಿಸುವುದು ಮತ್ತು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಇದೇ ಗುರುವಾರ (05/09/2024) ಬೆಳಗ್ಗೆ 11.00 ಗಂಟೆಗೆ ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದೆ.

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಶುಕ್ರವಾರ ಸಕಲೇಶಪುರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅದೇ ದಿನ ಸಮಿತಿಯ ವತಿಯಿಂದ ನಮ್ಮ ಸಮಸ್ಯೆಗಳ ಪಟ್ಟಿಯನ್ನು ತೆಗೆದುಕೊಂಡು ಹೋಗುವುದಕ್ಕೆ ನಿರ್ಣಯ ಮಾಡಿ ತಮ್ಮೆಲ್ಲರ ಸಮ್ಮುಖದಲ್ಲಿ ಗುರುವಾರ ಮಾಡಲಾಗುವುದು.

ಆ ದಿನ ಹೆತ್ತೂರು ಹೋಬಳಿ,ಯಸಳೂರು ಹೋಬಳಿ ,ಕಸಬಾ ಹೋಬಳಿ,ಹಾನಬಾಳು ಹೋಬಳಿ,ಬೆಳಗೋಡು ಹೋಬಳಿ, ಹೊಸಕೋಟೆ ಹೋಬಳಿ ಗಳಿಂದ ಒಂದು ಗ್ರಾಮದಿಂದ ಐದು ಜನ ನಿರ್ದೇಶಕರು ಒಂದು ಗ್ರಾಮ ಪಂಚಾಯಿತಿಯಿಂದ ಎರಡು ಜನ ಸಂಚಾಲಕರು ಮತ್ತು ಎರಡು ಜನ ಕಾರ್ಯದರ್ಶಿಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಹೋಬಳಿಗಳಿಂದ ಒಬ್ಬ ಉಪಾಧ್ಯಕ್ಷರನ್ನು ತೆಗೆದುಕೊಳ್ಳಲಾಗುವುದು, ಅದೇ ದಿನ ಮಾಧ್ಯಮ ಸಲಹೆಗಾರರು ಕಾನೂನು ಸಲಹೆಗಾರರು ಸೋಶಿಯಲ್ ಮೀಡಿಯಾ ನೋಡಿಕೊಳ್ಳುವವರನ್ನು ನೇಮಿಸಲಾಗುವುದು,

ಅದೇ ದಿನಾ ಲಾಯರ್ ವಿಶ್ವನಾಥ್ ಅವರು ಹಾಸನ ಹಾಗೂ ಮಾಯನೂರು ಕುಶಾಲಪ್ಪ ಅವರು ಹಾಸನ ಮತ್ತು ವಿಜಿ ಕುಮಾರ್ ಅವರು ಮತ್ತು ವಾಣಿ ಹೆತ್ತೂರು ಇವರು ಕಾನೂನು ಸಲಹೆಗಾರರು ಬರುವುದರಿಂದ ನಾವು ಯಾವತ್ತೂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದು ಎಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಆದ್ದರಿಂದ ಬರುವ ಸಬೀಕರಲ್ಲಿ ಮನವಿ ಏನು ಎಂದರೆ ನಿಮ್ಮಲ್ಲಿ ಇರುವ ದಾಖಲೆಗಳನ್ನು ತರುಬೇಕೆಂದುಬಾಚಿಹಳ್ಳಿ ಪ್ರತಾಪ್ ಗೌಡ ಅವರು ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *