
ಹಾಸನ ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಮೂರು ಮಂಗಳವಾರದಂದು ಹಸಿರೆಲೆ ಗೊಬ್ಬರದ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ ಪ್ರಮೋದ್ ಜಿ ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲ0ಯ ಕಾರೆಕೆರೆ ಹಾಸನ. ಹಸಿರೆಲೆ ಗೊಬ್ಬರದ ಮಹತ್ವವೇನು ,ಅದರಿಂದಾಗುವ ಉಪಯೋಗಗಳೇನು ಎಂಬುದನ್ನು ತುಂಬಾ ಸುಲಭವಾಗಿ ಅರ್ಥಮಾಡಿಸಿದರು.
ಹಾಗೂ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪದ್ದತಿಗಳಲ್ಲಿ ಬದಲಾಣೆಗಳ ಬಗ್ಗೆ ಹಾಗೂ ಭೂಮಿಯನ್ನು ಹದವಾಗಿ ಇಟ್ಟುಕೊಳ್ಳುದರ ಬಗೆಗೆ ಅದಲ್ಲದೆ ಹಸಿರೆಲೆ ಗೊಬ್ಬರದ ಗಿಡಗಳನ್ನು ಪರಿಚಯಿಸಿದರು ,ಅವುಗಳು ಯಾವೆಂದರೆ ಸೆಣಬು,ಹೊಂಗೆ,ಹಲಸಂದೆ ಇತ್ಯಾದಿಗಳು ಹಸಿರೆಲೆ ಗೊಬ್ಬರಗಳು ಎಂದು ಪರಿಚಯಿಸಿದರು.
ಹಾಗೂ ಹತ್ತು ಹಾಲು ಕೊಡುವ ಹಸುಗಳಿರಲಿ ಆದರೆ ಹತ್ತೆ ಹೊಡಿಯಲಿಕ್ಕಾದರು ಒಂದು ಜೊತೆ ಎತ್ತುಗಳಿರಬೇಕೆಂದು ಹಳ್ಳಿಯ ಜನರಿಗೆ ಮನವರಿಕೆ ಮಾಡಿಸಿದರು.
ಹಾಗೂ ಈ ಕಾರ್ಯಕ್ರಮದಲ್ಲಿ ಶ್ರೀಯುತ ದೀಪಕ್ ,ಮಂಜೇಗೌಡರು, ಸಿದ್ದೇಗೌಡರು, ಹಾಗೂ ಎಲ್ಲಾ ಕೆ.ಹೊಸಹಳ್ಳಿ ಗ್ರಾಮಸ್ತರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿತು.

