ದಿನಾಂಕ 06.09.2024ನೇ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದ ಸಲುವಾಗಿ ಸಕಲೇಶಪುರಕ್ಕೆ ಆಗಮಿಸಲಿದ್ದು

ಇಂದು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈಗಾಗಲೇ ಹಲವು ಬಾರಿ ಎತ್ತಿನಹೊಳೆ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಕಲೇಶಪುರದ ವಿವಿಧಡೆ ರಸ್ತೆ, ಸೇತುವೆ, ಗುಡ್ಡ ಕುಸಿತ ಮುಂತಾದ ಹಾನಿಗಳಾಗಿರುವ ಕುರಿತು ಮಾಹಿತಿ ನೀಡಿ ಸೂಕ್ತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರು ಸಹ ಯಾವುದೇ ರೀತಿಯ ಪರಿಹಾರ ಘೋಷಿಸಿಲ್ಲ,

ಹಾಗು ಅತಿಹೆಚ್ಚು ಮಳೆಯಿಂದಾಗಿ ಕಾಫಿ, ಮೆಣಸು, ಭತ್ತ, ಜೊಳ ಮುಂತಾದ ಬೆಳೆಗಳು ಸಹ ಹಾನಿಯಾಗಿದ್ದು ಈ ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಘೋಷಿಸಿದ ನಂತರವಷ್ಟೇ ಎತ್ತಿನಹೊಳೆ ಯೋಜನೆಯ ಲೋಕಾರ್ಪಣೆ ಮಾಡುವಂತೆ ವಿನಂತಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *