ಅರಕಲಗೂಡು:ಪ್ರಸಿದ್ಧ ಕೋಟೆ ಕೊತ್ತಲ ಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 53ನೇ ವರ್ಷದ ಅದ್ದೂರಿ ಗಣೇಶ ಮಹೋತ್ಸವಕ್ಕೆ ಭವ್ಯ ಮಂಟಪದಲ್ಲಿ ಶ್ರೀ ಗಣಪತಿ ಇವರನ್ನು ಪ್ರತಿಷ್ಠಾಪಿಸಲಾಯಿತು.

ಇಂದು ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಅರ್ಚಕರಾದ ಚಂದ್ರಶೇಖರ್ ರವರ ನೇತೃತ್ವದಲ್ಲಿ ಕಮಲಮ್ಮ ಮತ್ತು ಅಪ್ಪಾಜಿ ಗೌಡ್ರವರ ಕುಟುಂಬಸ್ಥರವರು ಸಾಂಪ್ರದಾಯಿಕ ಪೂಜೆ ಸಂಪ್ರದಾಯಗಳನ್ನು ನೆರವೇರಿಸಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮಾತನಾಡಿ 53ನೇ ವರ್ಷದ ಗಣೇಶ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಟುವಟಿಕೆಗಳು,ಗ್ರಾಮೀಣ ಕರಕುಶಲ ಪ್ರದರ್ಶನ ಮತ್ತು ತರಬೇತಿಯನ್ನು ನೀಡಲು ಉದ್ದೇಶಿಸಿದ್ದು ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣಪತಿಯವರ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಂಡರು

ಈ ಸಂದರ್ಭದಲ್ಲಿ ಕ್ರಷರ್ ಮಾಲೀಕರು ಹಾಗೂ ಸಮಾಜಸೇವಕ ಸುರೇಶ್, ರಾಜೇಂದ್ರಕುಮಾರ್, ಬಿಜೆ ಶ್ರೀನಿವಾಸ್, ಯೋಗೇಶ್ ,ಬಾಲು, ಮಂಜುಶೆಟ್ಟಿ ಗೌಡ ಹಾಜರಿದ್ದರು ಇದೇ ಸಂದರ್ಭದಲ್ಲಿ ಗಣಪತಿ ಸಮಿತಿಯ ಮಂಜು ಅವರು 108 ಈಡಿಗಾಯನ್ನು ಪಡೆದು ಹೊಡೆದರು ಮತ್ತು ಸೇರಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *