ಹಾಸನ: ಎಲ್ಲಾರ ಗಮನಸೆಳೆದಿರುವ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಶನಿವಾರ ಮದ್ಯಾಹ್ನದಂದು ಗಣ್ಯರ ಎದುರು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಗಣೇಶ ಪ್ರತಿಷ್ಠಾಪನೆಯು ಅದ್ಧೂರಿಯಾಗಿ ನೆರವೇರಿತು.

ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ ಪಾಂಚಜನ್ಯವತಿಯಿಂದ ಎಲ್ಲಾಸ್ವಯಂ ಸೇವಕರು ಸೇರಿ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನಮ್ಮ ಜಿಲ್ಲೆ ಮತ್ತು ರಾಜ್ಯದ ಜನೆತೆಗೆ ಆರೋಗ್ಯ, ಆಯಾಸ್ಸು, ಐಶ್ವರ್ಯ ಮತ್ತು ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ ಎಂದು ಭಗವಂತನಲ್ಲಿ ಹಾರೈಸುತ್ತೇನೆ. ಪ್ರತಿ ವರ್ಷವೂ ಕೂಡ ಪಾಂಚಜನ್ಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

ಈ ವರ್ಷವೂ ಕೂಡ ಒಳ್ಳೆ ರೀತಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ವಿಸರ್ಜನೆ ವೇಳೆಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಲಿ ಎಂದು ಹಾರೈಸುವುದಾಗಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಮೊದಲು ಗೌರಿ ಗಣಪತಿ ಹಬ್ಬದ ಶುಭಾಶಯಗಳನು ತಿಳಿಸುತ್ತೇನೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಲಿ. ಸಮಾಜದಲ್ಲಿ ಸೌಹಾರ್ಧತೆ ಇನ್ನಷ್ಟು ಹೆಚ್ಚಿಸಲಿ. ಬಂದು ಬಾಂಧವರಿಗೆ ಉತ್ತಮ ಆರೋಗ್ಯ ಕಲ್ಪಿಸಿ, ಪಾಂಚಜನ್ಯ ಹಿಂದೂ ಗಣಪತಿ ಸ್ಥಾಪನೆಗೊಂಡಿದ್ದು, ಸೆಪ್ಟಂಬರ್ ೭ ರಿಂದ ೧೨ರ ವರೆಗೂ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟಂಂಬರ್ ೧೨ ರಂದು ಬೃಹತ್ ಶೋಭಯಾತ್ರೆಯೊಂದಿಗೆ ದೇವಗೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.ಇದೊಂದು ಭಾವಕೈತೆಯ ಸಂಕೇತವಾಗಿದ್ದು, ನಾಡಿನ ಎಲ್ಲಾ ಜನರು ಒಗ್ಗಟ್ಟಾಗಿ ಬಂದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಇದೆ ವೇಳೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಮಾಜಿ ಅಧ್ಯಕ್ಷ ಆರ್. ಮೋಹನ್, ಸದಸ್ಯ ಶಂಕರ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ. ವಕೀಲ ಸಂಘದ ಮಾಜಿ ಅಧ್ಯಕ್ಷ ಶೇಖರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಅಖಿಲ ಭಾರತ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಎಂದು ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ವಾಸು, ಕಾರ್ಯದರ್ಶಿ ವೇಣುಗೋಪಾಲ್, ರವಿಸೋಮು, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್, ರಕ್ಷಿತ್ ಶೆಟ್ಟಿ, ಆರ್.ಎಸ್.ಎಸ್. ಮುಖಂಡ ಮೋಹನ್, ಶೋಬನ್ ಬಾಬು, ವಿಶಾಲ್ ಅಗರವಾಲ್, ಮೋಹನ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *