
ಸಕಲೇಶಪುರ : ಕುಶಾಲನಗರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಹಸುವೊಂದನ್ನು ಕಟಾವು ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾಗ ನಗರ ಠಾಣೆಯ ವೃತ್ತ ನಿರೀಕ್ಷಕರು ದಾಳಿ ನಡೆಸಿದ್ದಾರೆ.
ಆರೋಪಿಗಳು ಹಿಂಬದಿಯ ಕಿಟಕಿಯನ್ನು ಮುರಿದು ಪರಾರಿಯಾಗಿದ್ದು 50 ಕೆ.ಜಿ ಅಷ್ಟು ಪ್ರಮಾಣದ ಕಾಲಿನ ತೊಡೆ ಮಾಂಸ ಹಾಗೂ ಮಾರಲು ಪ್ಯಾಕೆಟ್ ಮಾಡಲು ಇಟ್ಟಿದ್ದ ಚಿಕ್ಕ ಚಿಕ್ಕ ಪಿಸ್ ಮಾಂಸಗಳು ಸಿಕ್ಕಿದ್ದು ಪೋಲಿಸರು ಪುರಸಭೆಗೆ ಮಾಹಿತಿ ನೀಡಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
