ಚನ್ನರಾಯಪಟ್ಟಣ : ರಾಯರ ರಂಗಮಂದಿರದಲ್ಲಿ ಶನಿವಾರ ಪಂಚಾಮೃತ ಅಭಿಷೇಕ ಗಣೇಶ ಅಷ್ಟೋತ್ತರ ಹಾಗೂ 21 ಬಗೆಯಮಹಾ ನೈವೇದ್ಯದೊಂದಿಗೆ ಸಾಂಪ್ರದಾಯಿಕವಾಗಿ ಪೂಜೆಯನ್ನು ಅರ್ಚಕರಾಗಿ ಚಿನ್ಮಯ ಹೆಗಡೆ ನೆರವೇರಿಸಿದರು .

ನಂತರ ಭಕ್ತರಿಗೆ ಕರಗಡಬು ಪ್ರಸಾದ ನೀಡಿ ಮಾತನಾಡಿದ ರಾಯರ ರಂಗಮಂದಿರದ ಆಚಾರ್ಯರಾದ ಪ್ರಕಾಶ ಮಾತನಾಡಿಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸುತ್ತಾರೆ ಎಂದರು

ಇದೇ ಸಂದರ್ಭದಲ್ಲಿ ರಾಯರ ರಂಗಮಂದಿರದ ಮುಖ್ಯಸ್ಥೆ ಭರತನಾಟ್ಯ ಕಲಾವಿದ ಡಾ. ಸ್ವಾತಿ ಪಿ.ಭಾರದ್ವಾಜ್ ಗ್ರಾಮೀಣ ಪ್ರದೇಶ ತೆರಳಿ ಗೋ ಪೂಜಾ ಸಲ್ಲಿಸಿ ಅಲ್ಲಿನ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಸಾಂಪ್ರದಾಯಿಕ ಸಂಪ್ರದಾಯವನ್ನು ಉಳಿಸಿ ಬೆಳೆಸುವಂತೆ ಗ್ರಾಮೀಣ ಪ್ರದೇಶದ ಜನರಿಗೆ ತಿಳಿಸುವ ಮೂಲಕ ಹಬ್ಬವನ್ನು ಆಚರಿಸಿದರು

ರಾತ್ರಿ 7:30ಕ್ಕೆ ಶ್ರೀ ಗಣೇಶನಿಗೆ ಮಹಾಮಂಗಳಾರತಿ ಮಾಡಿ ಬಂದಂತಹ ಭಕ್ತರಿಗೆ ತೀರ್ಥ ಪ್ರಸಾದ ನೀಡಿ ದೀಪ ಅಲಂಕಾರದ ಮೂಲಕ ಗಾಂಧಿ ಸರ್ಕಲ್ ನಲ್ಲಿ ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ನೀರಿನ ತೊಟ್ಟಿಗೆ ಗಣಪತಿಯನ್ನು ಮೂರು ಬಾರಿ ಮುಳುಗಿಸುವುದರ ಮೂಲಕ ವಿಸರ್ಜಿಸಲಾಯಿತು

ಈ ಸಂದರ್ಭದಲ್ಲಿ ರಂಗಮಂದಿರದ ಮುಖ್ಯಸ್ಥರಾದ ಅನಿತಾ ಪ್ರಕಾಶ್ , ಜಗದೀಶ್,ಯೋಗೇಶ್, ಕಾರ್ಪೆಂಟರ್ ಸಣ್ಣಪ್ಪ ,ಅರುಣ್,ಹಾಗೂ ಭಕ್ತರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *