ಹಾಸನ ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಹತ್ತು ಸೆಪ್ಟಂಬರ್ ಮಂಗಳವಾರದಂದು ಮಣ್ಣಿನ ಮಾದರಿ ತೆಗೆಯುವ ಪದ್ದತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಶೋಕ್ ಸಹಪ್ರಾಧ್ಯಾಪಕರು ಮಣ್ಣು ವಿಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ, ಡಾ.ಅನಿತಾ ಸಹಾಯಕ ಪ್ರಾಧ್ಯಾಪಕರು ಮಣ್ಣು ವಿಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಹಾಗೂ ಡಾ.ರೇಖಾ ಬಿ ತೋಟಗಾರಿಕೆ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ, ಹಾಗೂ ವಿಕ್ರಮ್ ಉಪವ್ಯವಸ್ಥಾಪಕರು ಎಮ್ ಸಿ ಎಫ್ ಹಾಸನ ಮತ್ತು ಪ್ರದೀಪ್ ಸಹಾಯಕ ವ್ಯವಸ್ಥಾಪಕರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಯಾದ ಕೆ.ಸುನಿಲ್ ಕುಮಾರ್ ಮಣ್ಣಿನ ಮಾದರಿ ತೆಗೆಯುವ ಪದ್ದತಿ ಪ್ರಾತ್ಯಕ್ಷಿಕೆಯ ಬಗ್ಗೆ ವಿವರಿಣೆ ನೀಡಿದರು‌ ಹಾಗೂ ಉಳಿದವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ ಅಶೋಕ್ ಎಲ್ ಬಿ ಅವರು ಮಣ್ಣಿನ ಮಾದರಿ ತೆಗೆಯುವ ಕ್ರಮವನ್ನು ತುಂಬಾ ಸುಲಭವಾಗಿ ನೆರೆದಿರುವ ರೈತರಿಗೆ ಅರ್ಥಮಾಡಿಸಿದರು.

ಹಾಗೂ ಡಾ.ಅನಿತಾ ಅವರು ಮಣ್ಣು ಮಾದರಿಯ ತೆಗೆಯುವುದರ ಪ್ರಾಮುಖ್ಯತೆ ಏನು ಹಾಗೂ ಉಪಯೋಗಗಳೇನು ಎಂಬುದನ್ನು ಅರಿವು ಮೂಡಿಸಿದರು.

ನಂತರ ಎಮ್ ಸಿ ಎಫ್ ಹಾಸನದಿಂದ ಬಂದ ವಿಕ್ರಮ್ ಅವರು ಕೆ.ಹೊಸಹಳ್ಳಿ ಗ್ರಾಮದ ರೈತರಲ್ಲಿ ಮಣ್ಣಿನ ಮಾದರಿ ತೆಗೆದುಕೊಂಡು ಮಣ್ಣು ಪರೀಕ್ಷೆ ಮಾಡಿ ಅದರಲ್ಲಿರುವ ಪೋಷಕಾಂಶಗಳ ಪ್ರಮಾಣಗಳ ಬಗ್ಗೆ ವಿವರಣೆ ನೀಡುತ್ತೇವೆ ಎಂದು ಎಲ್ಲಾ ರೈತರಿಗೆ ಭರವಸೆ ನೀಡಿದರು. ಹಾಗೂ ಈ ಕಾರ್ಯಕ್ರಮವು ಎಲ್ಲಾ ಕೆ.ಹೊಸಹಳ್ಳಿ ರೈತ ಬಾಂಧವರಿಂದ ಯಶಸ್ವಿಯಾಗಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *