ಸಕಲೇಶಪುರ :- ಸಕಲೇಶಪುರ ದಿಂದ ಬೇಲೂರು ಗೆ ಹೋಗುತಿದ್ದ KA09,F4742 ಬಸ್ ಗೆ ಬೆಳಗ್ಗೆ 7.30 ರ ಸಮಯದಲ್ಲಿ ಅರೇಹಳ್ಳಿ ಬಳಿ ಕಾರಿನಲ್ಲಿ (KA03MR 2002) ಬಂದ 4 ಜನ ಅಪರಿಚಿತರು ಬಸ್ ನಿಲ್ದಾಣದಲ್ಲಿ ವಾಹನವನ್ನು ನಿಲ್ಲಿಸಿರುವುದಿಲ್ಲ ಎಂದು ಹೇಳಿ ಏಕಾಏಕಿ ಕೆ. ಎಸ್.ಆರ್. ಟಿ. ಸಿ ವಾಹನದ ಚಾಲಕರ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆವೇಳೆ ಬಸ್ ನಲ್ಲಿ ಇದ್ದ 18 ಜನರನ್ನು ಬೇರೆ ಬಸ್ ವ್ಯವಸ್ಥೆ ಮಾಡಿ ಕಳಿಸಲಾಗಿದೆ. ಹಲ್ಲೆ ಮಾಡಿದವರನ್ನು ಕೂಡಲೆ ಬಂಧಿಸಿ ಕ್ರಮ ಕೈಗೊಳ್ಳುವಂತೆ ಚಾಲಕರು ಹಾಗೂ ನಿರ್ವಾಹಕರು ಅಗ್ರಹಿಸಿದ್ದಾರೆ.

ಸ್ಥಳಕ್ಕೆ ಅರೇಹಳ್ಳಿ ಪೊಲೀಸ್ ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳುವ ವರೆಗು ಸ್ಥಳದಿಂದ ಬಸ್ ಸಂಚರಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಸೇವೆಗೆಂದು ಇರುವ ಬಸ್ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಕೆಲಸದಲ್ಲಿ ಇದ್ದ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆಮಾಡಿರುವುದು ಅಪರಾಧ. ಹಲ್ಲೆಮಾಡಿದವರನ್ನು ಕೂಡಲೆ ಬಂಧಿಸಿ ಶಿಕ್ಷೆ ಕೊಡಿಸಬೇಕು ಎಂದು ಸಕಲೇಶಪುರ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮ್ಯಾನೇಜರ್ ವಿಪಿನ್ ಅಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *