
ಸಕಲೇಶಪುರ : ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿರುವ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜ್ರಾಬಾದ್ ಕೋಟೆಯಲ್ಲಿ ಸ್ಚಚತಾ ಕಾರ್ಯ ಮಾಡುವ ಮೂಲಕ ಅಂತರಾಷ್ಟ್ರೀಯ ದಿನಾಚರಣೆಯನ್ನು ಮಾನವ ಸರಪಳಿ ಮಾಡುವ ಮೂಲಕ ಆಚರಿಸಲಾಯಿತು,
ಇದೆ ಸಂದರ್ಭದಲ್ಲಿ ಅರಣ್ಯ ಇಲಾಖೆ ,ಮತ್ತು ಆನೆಮಹಲ್ ಗ್ರಾಮ ಪಂಚಾಯಿತಿ ವತಿಯಿಂದ ಗಿಡ ನೆಡುವಕಾರ್ಯವನ್ನು ಸಹ ಮಾಡಲಾಯಿತು .
ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿ ಪ್ರಪಂಚದಲ್ಲಿಯೇ ಬಲಿಷ್ಟವಾದ ಪ್ರಜಾಪ್ರಭುತ್ವದ ರಾಷ್ಟ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದ್ದು ಪ್ರಜಾಪ್ರಭುತ್ವ ಮಾಧರಿಯ ಸಂವಿಧಾನವನ್ನು ಕೊಟ್ಟಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು, ಎಲ್ಲರಿಗೂ ಸಮಾನತೆಯನ್ನು ಸಾರುವ ಲಿಖಿತ ಸಂವಿಧಾನವನ್ನು ಹೊಂದಿರುವ ನಮ್ಮ ಸಂವಿಧಾನ ಪ್ರಪಂಚದ ಇತರ ದೇಶಗಳಿಗೆ ಮಾಧರಿಯಾಗಿದೆ ಎಂದರು



