ಸಕಲೇಶಪುರ : ರಾಷ್ಟೋತ್ಥಾನ ಪರಿಷತ್ 60 ವರ್ಷ ಪೂರೈಸುತ್ತಿರುವ ಸಂಭ್ರಮದ ಒಂದು ಭಾಗವಾಗಿ ದ್ವಿತೀಯ ವರ್ಷದ ಬಿಎಡ್ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಕಾಲೇಜು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಭಾಷಣ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು.

ದಿನಾಂಕ 17 ಸೆಪ್ಟೆಂಬರ್ 2024 ರಂದು ಬೆಂಗಳೂರಿನ ರಾಷ್ಟೋತ್ಥಾನ ಪರಿಷತ್ ನ ಪ್ರಶಿಕ್ಷಣ ಭಾರತಿ ವತಿಯಿಂದ ಹಾಸನ ನಗರದ ಎನ್.ಡಿ.ಆರ್.ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸಕಲೇಶಪುರದ ಕೌಡಳ್ಳಿಯ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಶ್ರೀ ಚನ್ನಬಸಪ್ಪ ಗುಡಿದಿನ್ನಿ ರವರು ”ಭಾರತೀಯ ಶಿಕ್ಷಣ” ಹಾಗೂ ಪ್ರಶಿಕ್ಷಣಾರ್ಥಿ ಕುಮಾರಿ ಬೃಂದ ವಿ.ಆರ್ ರವರು ಭಾಗವಹಿಸಿ “ಸಮಾಜದ ದೃಷ್ಟಿಯಲ್ಲಿ ಶಿಕ್ಷಕ” ವಿಷಯದ ಕುರಿತಾಗಿ ಮಾತನಾಡಿ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಸಂಸ್ಥೆಯ ಪರವಾಗಿ ಹಾಗೂ ಸಿಬ್ಬಂದಿಗಳ ಪರವಾಗಿ ಸಂಯೋಜಕರಾದ ಶ್ರೀ ಮಂಜುನಾಥ ಆರ್ ರವರು ಅಭಿನಂದನೆ ಸಲ್ಲಿಸಿದ್ದಾರೆ .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *