
ಅರಸೀಕೆರೆ : ತಾಲೂಕಿನ ಕನಕಟ್ಟೆ ಹೋಬಳಿ ಮಾಡಾಳು ಗ್ರಾಮದ ಎರೆ ಏರಿ ಮೇಲಿರುವ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ದುಷ್ಕಾರ್ಮಿಗಳು ಶುಕ್ರವಾರ ರಾತ್ರಿ ಹುಂಡಿ ಬೀಗ ಹೊಡೆದು ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ
ಘಟನೆ ಬಗ್ಗೆ ಭಕ್ತ ಮಂಡಳಿಯ ಪರವಾಗಿ ಮುಖಂಡ ಎಂ ಸಿ ನಟರಾಜ್ ಸುದ್ದಿಗಾರರೊಂದಿಗೆ ಮಾತನಾಡಿ ಜಾತ್ರಾ ಗೌರಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಣ ಶೇಖರಣೆಯಾಗಿದೆ ಎಂದು ತಿಳಿದು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಹಣ ಕಳವು ಮಾಡಿದ್ದಾರೆ ಕಳೆದ ವರ್ಷವೂ ಸಹ ಗೌರಿ ಜಾತ್ರೆ ಸಮಯದಲ್ಲಿ ಹಣದೋಚಿದ್ದರು ಈ ಬಾರಿಯೂ ಹಣದೋಚಿದ್ದು ಈ ಬಗ್ಗೆ ಕನಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
