
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಇಪ್ಪತ್ತು ಶುಕ್ರವಾರದಂದು ತೆಂಗಿನ ಮರದಲ್ಲಿ ಸಮಗ್ರ ಕೀಟ ನಿರ್ವಹಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ ಬಸವರಾಜು ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ. ಮೊದಲಿಗೆ ಕೃಷಿ ವಿದ್ಯಾರ್ಥಿಗಳು ತೆಂಗಿನ ಮರಗಳಲ್ಲಿ ಬರುವಂತಹ ಕೀಟಗಳನ್ನು , ಅದರಿಂದಾಗುವ ದುಶ್ಪರಿಣಾಮಗಳ ಬಗ್ಗೆ ತಿಳಿಸಿದರು ಹಾಗೂ ಈ ಕೀಟಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಬಸವರಾಜು ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಆಗಮಿಸಿರುವ ಇವರು ತೆಂಗಿನ ಮರದಲ್ಲಿ ಕಂಡುಬರುವ ರೈನೋಸರಸ್ ದುಂಬಿ,ಕೆಂಪು ಮೂತಿ ಹುಳು, ಹಾಗೂ ನುಸಿ ಕೀಟಗಳು ಯಾವ ರೀತಿಯಲ್ಲಿ ತೆಂಗಿನ ಮರಗಳನ್ನು ನಾಶಪಡಿಸುತ್ತವೆ,ಹಾಗೂ ಇವುಗಳನ್ನು ಹೇಗೆ ತಡೆಗಟ್ಟಬೇಕು ,ಹಾಗೂ ರೈತ ಬಾಂಧವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು ಎಂಬುದನ್ನು ಸುವಿಸ್ತಾರವಾಗಿ ತಿಳಿಸಿದರು.
ನಂತರದಲ್ಲಿ ಇವರು ರೈತ ಬಾಂಧವರಲ್ಲಿದ್ದ ಸಮಸ್ಯಗಳಿಗೆ ಪರಿಹಾರವನ್ನು ನೀಡಿದರು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಕಾರ್ಯಕ್ರಮವು ಕೆ.ಹೊಸಹಳ್ಳಿ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಜರುಗಿತು.
