ಗದಗ : ಉತ್ತರ ಕರ್ನಾಟಕ ಜನರ ಜೀವನಾಡಿ ಯಾಗಿರುವ ಕಳಸಾ ಬಂಡೂರಿ, ಮಹದಾಯಿ ಅನುಷ್ಠಾನವಾಗುವವರೆಗೂ ಕರವೇ ನಿರಂತರ ಹೋರಾಟ ಮುಂದುವರಿಸಲಿದೆ, ಕರ್ನಾಟಕ ರಕ್ಷ ಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಯಾವುದೇ ಹೋರಾಟ ಕೈಗೆತ್ತಿ ಕೊಂಡರು ಅದಕ್ಕೊಂದು ತಾರ್ಕಿಕ ಅಂತ್ಯ ನೀಡುವವರೆಗೆ ಹಿಂದಡಿ ಇಟ್ಟಿಲ್ಲ ಈ ವಿಷಯದಲ್ಲಿಯೂ ಯೋಜನೆ ಅನುಷ್ಠಾನ ಆಗುವವರೆಗೂ ನಿದ್ರಿಸುವುದಿಲ್ಲ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಹೇಳಿದರು.

ಈ ವೇಳೆ ಪೊಲೀಸರ ಲಾಠಿ ಏಟು ತಿಂದಿದ್ದೇವೆ, ಯಾವುದಕ್ಕೂ ಜಗ್ಗದೇ ಮುಂದೆ ನಡೆದಿದ್ದೇವೆ. ಅನೇಕ ಸಂದರ್ಭದಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಅದೇ ರೀತಿ, ಕಳಸಾ ಬಂಡೂರಿ, ಮಹದಾಯಿ ಯೋಜನೆ ಯಶೀಘ್ರ ಅನುಷ್ಠಾನಕ್ಕೆ ಪಾದಯಾತ್ರೆ ನಡೆಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಯೋಜನೆ ಅನುಷ್ಠಾನಕ್ಕೆ ಕೂಡಲೇ ಗಮನ ನೀಡಬೇಕು ಇಲ್ಲ ವಾದರೆ ಮುಂದಿನ ಹೋರಾಟದ ರೂಪುರೇಷೆಗಳೇ ಬೇರೆ ಸ್ವರೂಪ ಪಡೆ ದುಕೊಳ್ಳಲಿವೆ. ಕಳಸಾ ಬಂಡೂರಿ ಜಾರಿಗೆ ಅನೇಕ ವರ್ಷಗಳಿ೦ದ ಹೋರಾಟ ಮಾಡಲಾಗುತ್ತಿದೆ.ಆದರೂ, ಯೋಜನೆ ನನೆಗುದಿಗೆ ಬಿದ್ದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಇವರು ಅವರು, ಅವರು ಇವರು ಬೆರಳು ತೋರಿಸುತ್ತಾ ಬಂದಿದ್ದಾರೆ ಯೇಹೊರತು, ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಸಿಲ್ಲ ಎಂದು ಕಿಡಿಕಾರಿದರು.

ನಾಡಿನ ನೆಲ ಜಲ ಭಾಷೆಗೆ ಸಂಬಂಧಿಸಿದಂತೆ ನಮ್ಮ ವೇದಿಕೆ ವತಿಯಿಂದ ಅನೇಕ ಹೋರಾಟ ನಡೆಸಲಾಗಿದೆ.

ಒಂದು ತಿಂಗಳೂ ಆಗಾಗಿ ಪ್ರಗತಿ ಕಾಣದಿದ್ದರೆ ಸಂಸದರು, ಕೇಂದ್ರ ಸಚಿವರ ಮನೆ ಮುಂದೆ ಧರಣಿ ಕೂರಲಾಗುವುದು. ಉತ್ತರ ಕರ್ನಾಟಕ ಸಹ್ಯಾದ್ರಿ ಎನಿಸಿರುವ ಕಪ್ಪತ್ತಗುಡ್ಡದಲ್ಲಿನ ಔಷಧೀಯ ಸಸ್ಯ ಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು. ಕಪ್ಪತ್ತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಯೋಜನೆ ಅನುಷ್ಠಾನ ವಿಷಯ ವಾಗಿ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿ ಹೆಚ್ಚಿನ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನರಗುಂದದಿಂದ ಪ್ರಾರಂಭವಾಗಿರುವ ಪಾದಯಾತ್ರೆ ಶಲವಡಿ ಮಾರ್ಗವಾಗಿ ಗದಗ ನಗರಕ್ಕೆ ಬಂದಿದ್ದು, ಪಾದ ಯಾತ್ರೆಯಲ್ಲಿ ಸಾವಿರಾರು ಕಾರ್ಯ ಕರ್ತರು, ರೈತ ಮುಖಂಡರು ಭಾಗವ ಹಿಸಿದ್ದರು.

ಪಾದಯಾತ್ರೆ ಮಾಡುವ ವೇಳೆ ಅನೇಕ ಕಡೆಗಳಲ್ಲಿ ಜನರು ಬಯಲು ಶೌಚಕ್ಕೆ ತೆರಳುತ್ತಿದ್ದುದನ್ನು ನೋಡಿ ಬೇಸರವಾಯಿತು. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಕ್ರಮ ವಹಿಸಬೇಕು.

ಈ ವೇಳೆ ಜಿಲ್ಲೆ ಮತ್ತು ತಾಲೂಕುಗಳಿಂದ ಕರವೇ ಅಧ್ಯಕ್ಷರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆಯಲ್ಲಿ ಭಾಗಿಯಾದರು.

ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿಯೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುಮಾರು 45 ಕಿಲೋಮಿಟರ್ ಪಾದಯಾತ್ರೆ ಮಾಡುವ ಮೂಲಕ ಮಹದಾಯಿ ಯೋಜನೆ ಅನುಷ್ಠಾನವಾಗುವವರೆಗೂ ನಾವುಗಳು ರಾಜ್ಯಾಧ್ಯಕ್ಷರ ಬೆನ್ನೆಲುಬಾಗಿ ಅವರ ಜೊತೆಯಲ್ಲಿಯೇ ನಿರಂತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ.

ಇದು ಕೇವಲ ಕರ್ನಾಟಕ ರಕ್ಷಣಾ ವೇದಿಕೆ ಕನಸಾಗಿಲ್ಲ ಪ್ರತಿಯೊಬ್ಬ ಕನ್ನಡಿಗನ ಕನಕಗಿದೆ ಹಾಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅತಿ ಶೀಘ್ರವಾಗಿ ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *