
ಬೇಲೂರು : ಪಟ್ಟಣ ಸಮೀಪ ಇರುವ ಚೀಕನಹಳ್ಳಿ ರಸ್ತೆಯ ಎನ್ ನಿಡಗೋಡು ಗ್ರಾಮದ ಬಳಿ ಹಾಲಿನ ಡೈರಿ ಎದುರು ಬೇಲೂರಿನಂದ ಮೌಂಟ್ ಕಾರ್ಮೆಲ್ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಗೆ ಎದುರು ಗಡೆಯಿಂದ ಸ್ಕೂಟಿಯಲ್ಲಿ ಬಂದ ಪಟ್ಟಣದ ಚನ್ನಕೇಶವ ನಗರದ ನಾಗೇಂದ್ರ (೫೧ ವರ್ಷ ) ಎಂಬುವವರು ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬೇಲೂರು ವೃತ್ತ ನಿರೀಕ್ಷಕ ಜಯಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ದಟ್ಟಣೆಯಾಗಿದ್ದು ಸಂಚಾರ ವನ್ನು ನಿಯಂತ್ರಿಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.



