
ಹಾಸನ ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಎರೆಹುಳು ಗೊಬ್ಬರ ಪದ್ದತಿ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಪ್ರಮೋದ ಜಿ ಸಹಾಯಕ ಪ್ರಾಧ್ಯಾಪಕರು ಕೃಷಿ ಮಹಾವಿದ್ಯಾಲಯ ಕಾರೆಕೆರೆ,ಹಾಸನ ಇವರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಎರೆಹುಳು ಗೊಬ್ಬರ ತಯಾರಿಗೆ ಸಿಧ್ಧತೆಗಳು ಏನೇನು ಮಾಡಬೇಕು ಎಂಬುದರ ಬಗ್ಗೆ ಹಾಗೂ ಎರೆಹುಳು ಗೊಬ್ಬರ ಸುಲಭವೂ ಹೌದು ಹಾಗೂ ಕಡಮೆ ವೆಚ್ಚದಲ್ಲಿ ತಯಾರಿ ನಡೆಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು. ಹಾಗೂ ಪ್ರಾಯೋಗಿಕವಾಗಿ ಎರೆಹುಳು ಗೊಬ್ಬರ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟರು.
ಹಾಗೂ ನಂತರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರಮೋದ ಜಿ ಇವರು ಎರೆಹುಳು ಗೊಬ್ಬರದ ಪ್ರಾಮುಖ್ಯತೆ ಮತ್ತು ಅದರಿಂದಾಗುವ ಉಪಯೋಗಗಳ ಬಗ್ಗೆ ರೈತಬಾಂಧವರಿಗೆ ಅರ್ಥಪೂರ್ಣವಾಗಿ ತಿಳಿಸಿದರು.
ಹಾಗೂ ನೆರೆದಿರುವ ಎಲ್ಲಾ ರೈತಮಹಿಳೆಯರಿಗೂ ಹಾಗೂ ಪ್ರಗತಿ ಪರ ರೈತರಿಗೂ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಏನಾದರು ಸಂದೇಹಗಳಿದ್ದಲ್ಲಿ ಕೇಳಬಹುದು ಹಾಗೂ ನಿಮ್ಮ ಕೃಷಿ ಬದುಕಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆಯನ್ನು ಒಂದು ಭಾಗವಾಗಿ ಮಾಡಿಕೊಂಡು ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಆಗ ರೈತರು ಸಂದೇಹಗಳನ್ನು ,ತಮ್ಮ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸೂಕ್ತ ಸಲಹೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಂಡರು. ಪ್ರಗತಿ ಪರ ರೈತರಾದ ಶ್ರೀಯುತ ದೀಪಕ್ ,ಊರಿನ ಹಿರಿಯರು,ಊರಿನ ರೈತಮಹಿಳೆಯರು,ಕಾರ್ಯಕ್ರಮಕ್ಕೆ ತಮ್ಮ ಮನಪೂರ್ವಕವಾಗಿ ಬೆಂಬಲ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
