
ಅರಸೀಕೆರೆ : ರೈತರ ಹಿತ ಕಾಪಾಡುವ ಮೂಲ ಉದ್ದೇಶದೊಂದಿಗೆ ಕೃಷಿ ಪತ್ತಿನ ಸಹಕಾರ ಸ ಸಂಘವು ಕಾರ್ಯನಿರ್ವಹಿಸುತ್ತಿದ್ದು ಈ ಕಾರ್ಯಕ್ಕೆ ಸಂಘದ ನಿರ್ದೇಶಕರುಗಳು ಹಾಗೂ ಎಲ್ಲಾ ಸೇರುದಾರರ ಸಹಕಾರ ಅತ್ಯಗತ್ಯ ಎಂದು ಮಾಡಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಸಿ ನಟರಾಜ್ ಬುಧವಾರ ತಿಳಿಸಿದರು
ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸಂಘದ ಆವರಣದಲ್ಲಿ ಆಯೋಜಿಸಿದ್ದ 23 24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭಾ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು
ಸಹಕಾರ ಸಂಘಗಳು ರೈತರ ಸಹಕಾರದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಸಂಘದ ಸದಸ್ಯರು ಸಹ ಸಹಕಾರ ತತ್ವಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಸಂಘವನ್ನು ಉನ್ನತಿಯತ್ತ ಕೊಂಡು ಹೋದಾಗ ಮಾತ್ರ ಎಲ್ಲರ ರೈತರ ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು
2024ರ ಮಾರ್ಚ್ ಅಂತ್ಯಕ್ಕೆ ನಮ್ಮ ನಮ್ಮ ಸಂಗವು ಬ್ಯಾಂಕಿನಲ್ಲಿಎಂಟು ಕೋಟಿ 14 ಲಕ್ಷದ 29,000 ಸಾವಿರ ವಹಿವಾಟು ನಡೆಸಿದ್ದು ಇದರಲ್ಲಿ ನಮ್ಮ ಸಂಗವು 5 30,000 ನಿವ್ವಳ ಲಾಭ ಗಳಿಸಿದೆ ಎಂದು ಅವರು ತಿಳಿಸಿದರು
ಕ್ಷೇತ್ರ ಮೇಲ್ವಿಚಾರಕ ಸೋಮೇಶ್ ಮಾತನಾಡಿ ಸಂಘದಿಂದ ಸಾಲ ಪಡೆದವರು ಸಾಲ ದುರ್ಬಳಕೆ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಂಡು ಅಕಾಲದಲ್ಲಿ ಮರುಪಾವತಿ ಮಾಡಿದರೆ ಸಂಘವು ಮತ್ತೊಬ್ಬರಿಗೆ ಸಾಲ ನೀಡಲು ಸಹಾಯವಾಗುತ್ತದೆ ಆದ್ದರಿಂದ ಈ ಬಗ್ಗೆ ಗಮನಹರಿಸಿರುವುದು ಒಳ್ಳೆಯದು ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸದಸ್ಯ ಎಂಇ ಚಂದ್ರಶೇಖರ್ ರೈತರ ಅಭಿವೃದ್ಧ ಹಾಗೂ ಬೆಳವಣಿಗೆಗೆ ಬೇಕಾದ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕರಿಗೆ ಹಾಗೂ ಕಾರ್ಯದರ್ಶಿಗೆ ವರದಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ರೈತರು ಕಾರ್ಯದರ್ಶಿಯ ಕಾರ್ಯ ವೈಖರಿಯ ಬಗ್ಗೆ ವಾಗ್ದಾಳಿ ನಡೆಸಿದರು
ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಯಾರು ಏನು ಮಾತನಾಡುತ್ತಾರೆ ಎಂಬುದು ಗೊತ್ತಾಗಲಿಲ್ಲ ಸಭೆ ಆರಂಭವಾಗುತ್ತಿದ್ದಂತೆ ಕಾರ್ಯದರ್ಶಿ ಎಂಸಿ ಕುಮಾರ್ ವಾರ್ಷಿಕ ಮಹಾಸಭೆಯ ಜಮಾ ಖರ್ಚು ಓದಿ ರೆಕಾರ್ಡ್ ಮಾಡಿದರು
ಸಭೆಯಲ್ಲಿ ನಿರ್ದೇಶಕರುಗಳಾದ ಎಂ ಎಸ್ ವಿ ಸ್ವಾಮಿ ಎಮ್ ಶಿವದೇವ್ ಎಸ್ ಎಮ್ ಓಂಕಾರ್ ಮೂರ್ತಿ ಡಿ ಆರ್ ಚೌಡಯ್ಯ ಎಸ್ ಎಸ್ ಬಸವರಾಜ್ ರಂಗನಾಥ್ ಮಾಡಾಳು ಗ್ರಾಮ ಪಂಚಾಯತಿ ಅಧ್ಯಕ್ಷ mg ಯೋಗೀಶ್ ದಲಿತ ಮುಖಂಡರಾದ ಚಂದ್ರಪ್ಪ ಕಟ್ಲಿ ತಿಮ್ಮಯ್ಯ ವಿಜಯಕುಮಾರ್ ರಂಗನಾಥ್ ಪಾಲ್ಗೊಂಡಿದ್ದರೂ ರೈತರ ಹಿತ ಕಾಪಾಡುವುದೇ ಕೃಷಿ ಪತ್ತಿನ ಸಹಕಾರ ಸಂಘದ ಉದ್ದೇಶ ಎಮ್ ಸಿ ನಟರಾಜ್
