
ಸಕಲೇಶಪುರ:- ಹಾಸನ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಈಚಲುಬೀಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 80 ವಿದ್ಯಾರ್ಥಿಗಳಿಗೆ ಜ್ಞಾನ ಸಮೃದ್ಧ ಚಾರಿಟೇಬಲ್ ಟ್ರಸ್ಟ್ (ರಿ ) ವತಿಯಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನ ಸಮೃದ್ಧ ಚಾರಿಟೇಬಲ್ ಟ್ರಸ್ಟ್ (ರಿ ) ಸಂಸ್ಥಾಪಕರಾದ ತೀರ್ಥಾನಂದ (ಕೀರ್ತಿ )” ಸರ್ಕಾರಿ ಶಾಲೆಯಲ್ಲಿ ಕಳೆಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ನಮ್ಮ ಟ್ರಸ್ಟ್ ನ ಮೂಲಕ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಬಂದಿದ್ದೇವೆ. ಈ ಬಾರಿ ಸ್ವಲ್ಪ ತಡವಾಗಿ ಪ್ರಾರಂಭಿಸಿದ ಈ ಕೆಲಸವು ಆದಷ್ಟು ನಾವು ಅಂದುಕೊಂಡಂತಹ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತೆವೆ. ” ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ್, ಶಾಲಾ ಸಹ ಶಿಕ್ಷಕರು ಹಾಗೂ ಬಿಜೆಪಿ ಮುಖಂಡರಾದ ಬೆಕ್ಕನಹಳ್ಳಿಯ ಸವಿನ್ ಗೌಡ, ಉಪಸ್ಥಿತರಿದ್ದರು.



