
ಸಕಲೇಶಪುರ :- ಯಸಳೂರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯುನ್ನು ವೀರಶೈವ ಸಮುದಾಯ ಭವನದಲ್ಲಿ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅಧ್ಯಕ್ಷರಾದ ಪ್ರಸಂತ್ ಕುಮಾರ್ ” ರೈತರು ಉತ್ತಮ ರೀತಿಯಲ್ಲಿ ನಮ್ಮ ಸಹಕಾರ ಸಂಘಕ್ಕೆ ಸ್ಪಂದಿಸುತ್ತಿದ್ದಾರೆ. ನಮ್ಮ ಸಂಘದ ಸೂಪರ್ ಮಾರ್ಕೆಟ್ ವ್ಯಾಪಾರ ಉತ್ತಮವಾಗಿದ್ದು ,ಪಿಗ್ಮಿ ಕಲೆಕ್ಷನ್,ಕೃಷಿ ಸಾಲ ಮತ್ತು ಸ್ವಸಹಾಯ ಸಂಘಗಳ ಮಹಿಳಾ ಮತ್ತು ಪುರುಷರ ಗುಂಪಿಗೆ ನಾವು ಸಾಲ ಸೌಲಭ್ಯವನ್ನು ಕೊಟ್ಟಿರುತ್ತೇವೆ.ಇದರಿಂದ ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದಾರೆ.
ನಮ್ಮ ಸಂಘದ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವರ್ಗ ಸದಾ ರೈತರ ಆಗು ಹೋಗುಗಳಿಗೆ ಸ್ಪಂದಿಸುತ್ತಾ ಬಂದಿರುತ್ತೇವೆ. ರೈತರೂ ಸಹ ನಮ್ಮ ಜೊತೆ ಕೈಜೋಡಿಸಿದರೆ ಮುಂದಿನ ದಿನಗಳಲ್ಲಿ ಇನ್ನೊಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಸಾಗುತ್ತೇವೆ.ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಎ ವಸಂತಕುಮಾರ್, ಉಪಾಧ್ಯಕ್ಷರಾದ ಕೆ.ಪಿ ಶಶಿ ಶೇಖರ್, ಜಿ.ಆರ್ ಲೋಕೇಶ್,ಪಿ.ಬಿ ಚಂದ್ರಶೇಖರ್, ಎ.ಎಸ್ ರಾಜಕುಮಾರ, ಬಿ.ಡಿ ಕುಮಾರಯ್ಯ, ಬಿ. ಆರ್ ರವಿತೇಜ, ಬಿ.ಎಂ ಗೀತಾ, ಕೆ. ಜಿ ಮಮತಾ,ಸೈಯದ್ ಅಮೀರ್,ಮೇಲ್ವಿಚಾರಕರಾದ ವಿ.ಎನ್ ನವೀನ್ ಹಾಜರಿದ್ದರು.


