
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ.ಹೊಸಹಳ್ಳಿ ಗ್ರಾಮದಲ್ಲಿ ಬೆಳೆ ವಿಮೆಯ ಮಹತ್ವ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ ಗಗನ ಎಮ್ ಡಿ ಸಹಾಯಕ ಪ್ರಾಧ್ಯಾಪಕರು ಕೃಷಿ ಅರ್ಥಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ, ಹಾಸನ ಇವರು ಆಗಮಿಸಿದ್ದರು.
ಕೃಷಿ ವಿದ್ಯಾರ್ಥಿಗಳು ಮೊದಲಿಗೆ ಬೆಳೆವಿಮೆಯ ಬಗ್ಗೆ ಮತ್ತು ಅದರಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.
ಅದಲ್ಲದ ಬೆಳೆವಿಮೆಯು ರೈತರ ನಷ್ಟಗಳಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಬೆಳೆವಿಮೆಯು ರೈತರ ಬೆಳೆಗಳು ನಾಶವಾದಲ್ಲಿ, ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿದಲ್ಲಿ ಸಹಕಾರವಾಗುತ್ತದೆ.
ಬೆಳೆವಿಮೆಯು ಯಾವ ಯಾವ ಬೆಳೆಗಳಿಗೆ ಎಷ್ಟೆಷ್ಟು ಬೆಳೆವಿಮೆಯು ಸಿಗುತ್ತದೆ ಎಂಬುದನ್ನು ಶೇಖವಾರು ತಿಳಿಸಿದರು. ರಾಗಿ ಹಾಲುಗಡ್ಡೆ,ಮತ್ತು ಮೆಕ್ಕೆಜೋಳ ಇವುಗಳಿಗೆ ಬೆಳೆವಿಮೆಯ ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂಬುದನ್ನು ತಿಳಿಸಿದರು. ನಂತರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ ಗಗನ ಎಮ್ ಡಿ ಇವರು ಬೆಳೆ ವಿಮೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಹಾಗೂ ರೈತರಿಗೆ ಬೆಳೆವಿಮೆ ಮಾಡಿಸಿಕೊಳ್ಳಿ ಮತ್ತು ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಈ ಕಾರ್ಯಕ್ರಮವು ಊರಿನ ಎಲ್ಲಾ ರೈತಬಾಂಧವರ ಸಮ್ಮುಖದಲ್ಲಿ ಯಶಸ್ವಿಯಾಗಿತು.
