
ಸಕಲೇಶಪುರ : ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅದ್ಯಕ್ಷತೆಯಲ್ಲಿ ಕರೆಯಲಾದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು ನಮ್ಮ ತಾಲೂಕಿನಲ್ಲಿ ನಡೆಯುವ 4 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೆನದ ಯಶಸ್ಸಿಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೇಘನಾ ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಜಿ.ವಿ.ಗಂಗಾಧರ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ತಾ.ಪಂ.ಸಹಾಯಕ ನಿರ್ದೇಶಕ ಆದಿತ್ಯ, ಕಸಾಪ ಮಾಜಿ ಅದ್ಯಕ್ಷರಾದ ಪ್ರಸಾದ್ ರಕ್ಷಿದಿ, ಜೈಭೀಮ್ ಮಂಜು, ಕಾರ್ಯದರ್ಶಿ ಯೋಗೀಶ್, ಮೀನಾಕ್ಷಿ ,ಆರ್,ಅಣ್ಣಪ್ಪ ಸ್ವಾಮಿ, ನಲ್ಲುಲಿ ಸತೀಶ್, ನಿರ್ವಾಣಯ್ಯ, ಬೆಳಗೋಡು ಕಸಾಪ ಹೋಬಳಿ ಅದ್ಯಕ್ಷೆ ನೇತ್ರಾ ಮಂಜುನಾಥ್, ಕಸಾಪ ಹಿರಿಯ ಸದಸ್ಯರಾದ ಅಣ್ಣೇಗೌಡ, ರಾಕೇಶ್,ಶ್ರೀನಿವಾಸ್, ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
