ಹಾಸನ: ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ, ಬೆಂಗಳೂರು ಮತ್ತು ಹಾಸನದ ಕಾರೆಕೆರೆಯ ಕೃಷಿ ಮತ್ತು ಕೃಷಿ ಜೈವಿಕತಂತ್ರಜ್ಞಾನದ ವಿದ್ಯಾರ್ಥಿಗಳು, ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೪ ರ ಅಂಗವಾಗಿ ಸೆಪ್ಟೆಂಬರ್ ೨೬ ರಂದು ಉಚಿತ ಪಶು ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದರು.

ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಪಶುಸಂಗೋಪನಾ ಇಲಾಖೆಯಹಿರಿಯ ವಿದ್ಯಾರ್ಥಿಗಳ ಸಂಘ, ಯುಎಎಸ್ ಬೆಂಗಳೂರು ಹಾಗೂ ಕೃಷಿತಂತ್ರಜ್ಞಾನರ ಸಂಸ್ಥೆ ಹಾಸನ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಿತು. ಗ್ರಾಮದಲ್ಲಿ ಹೈನುಗಾರಿಕೆ ಒಂದು ಪ್ರಮುಖ ಕಸುಬಾಗಿದ್ದು ಜನವರುಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷಿಯಿಂದ ಕಾರ್ಯಕ್ರಮ ನಡೆಸಲಾಯಿತು.

ಶಿಬಿರದಲ್ಲಿ ಪಶುಗಳ ತಪಾಸಣೆ, ಉಚಿತ ವೆಟರಿನರಿ ಔಷಧಗಳ ವಿತರಣೆ, ಚಪ್ಪೆರೋಗ ತಡೆಗಟ್ಟುವ ಲಸಿಕೆ ಹಾಕುವುದು ಮತ್ತು ರೋಗವನ್ನು ನಿಯಂತ್ರಿಸುವುದು ಹೇಗೆ ಎಂಬುದರ ಮಾಹಿತಿ ನೀಡಿದರು.ವೈದ್ಯಕೀಯ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಶಿಬಿರಕ್ಕೆ ಆಗಮಿಸಿ 166 ಹಸು, 16 ಕುರಿ ಮತ್ತು ಮೇಕೆ ಹಾಗೂ 8 ನಾಯಿ ತಪಾಸಣೆ ಮಾಡಿ ಉಚಿತ ಚಿಕಿತ್ಸೆ ನೀಡಿದರು.

ಕಾರ್ಯಕ್ರಮಕ್ಕೆ ಅರ್ಥಶಾಸ್ತ್ರ ವಿಭಾಗದ ಡಾ.ಅರವಿಂದ ಕುಮಾರ್, ಬೇಸಾಯಶಾಸ್ತ್ರ ವಿಭಾಗದ ಡಾ.ಸದಾಶಿವನ್ ಗೌಡ.ಎಸ್.ಎನ್.ಓ, ಕೃಷಿ ವಿಸ್ತರಣಾ ವಿಭಾಗದ ಡಾ.ವಿನೋದ ಶಂಕರ ನಾಯಕ್ ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಶಿವಕುಮಾರ್.ಎಂ, ಡಾ.ರವಿಕುಮಾರ್.ಬಿ.ಪಿ, ಡಾ.ಮಂಜುನಾಥ ರವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *