
ಸಕಲೇಶಪುರ :- ಪಟ್ಟಣದಲ್ಲಿ ಹೌಸಿಂಗ್ ಬೋರ್ಡ್ ನಿವಾಸಿ ಮಂಜಯ್ಯ ರವರು ಮೂರು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು. ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಮಂಗಳ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ನೀಡುವ ಜನಮಂಗಲ ಕಿಟ್ ವೀಲ್ ಚೇರ್ ಅನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ವೈದ್ಯರಾದ ಡಾಕ್ಟರ್ ನವೀನ್ ಚಂದ್ರ ಶೆಟ್ಟಿ ರವರು ವೀಲ್ ಚೇರ್ ನನ್ನು ವಿತರಣೆ ಮಾಡಿದರು.
ಹಾಗೂ ಕುಶಾಲನಗರದ ಗಂಗಮ್ಮ ಎಂಬುವರು ಮೂರು ವರ್ಷದಿಂದ ಅನಾರೋಗ್ಯ ಪೀಡಿತರಾಗಿ ಮಲಗಿದ್ದರು.ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಮಂಗಳ ಕಾರ್ಯಕ್ರಮದಲ್ಲಿ ವಾಟರ್ ಬೆಡ್ ನ್ನು ಜನಜಾಗೃತಿ ವೇದಿಕೆಯ ಸದಸ್ಯರಾದ ಗಿರೀಶ್ ಮಂಜುನಾಥ್ ವಿತರಿಸದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಚೀರಂತ್.ಹಾಗೂ ಸೇವಾ ಪ್ರತಿನಿಧಿಯವರು ಸಂಘದ ಸದಸ್ಯರು ಭಾಗವಹಿಸಿದ್ದರು.




