ಸಕಲೇಶಪುರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ ಬಾರಿ 4 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಚರ್ಚಿಸಲು ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಾರದಾ ಗುರುಮೂರ್ತಿ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಪಟ್ಟಣದ ಲಯನ್ಸ್ ಸಭಾಂಗಣ ಕರೆಯಲಾಗಿತ್ತು.

ಈ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ದಿನಾಂಕ ಹಾಗೂ ಸ್ಥಳವನ್ನು ಗುರುತಿಸಿ ಅಂತಿಮ ಗೊಳಿಸುವ ನಿಟ್ಟಿನಲ್ಲಿ ನೆರೆದಿದ್ದ ಸಾಹಿತ್ಯ ಅಭಿಮಾನಿ ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಸದಸ್ಯರು , ಎಲ್ಲಾ ಸಾಹಿತ್ಯ ಕನ್ನಡ ಅಭಿಮಾನಿಗಳು ಸಂಘ ಸಂಸ್ಥೆಗಳು ಪ್ರಮುಖರು ತಾಲ್ಲೂಕಿನ ಪ್ರಮುಖ ಮುಖಂಡರುಗಳು ಈ ಸಭೆಗೆ ಹಾಜರಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *