
ಆಲೂರು : ತಾಲ್ಲೂಕಿನ ನಿಲ್ದಾಣದಲ್ಲಿ ಬೆಂಗಳೂರು, ಮಂಗಳೂರು, ಧರ್ಮಸ್ಥಳ ,ಮೈಸೂರು ಹಾಗೂ ಸುತ್ತಮುತ್ತ ಹಲವಾರು ಹಳ್ಳಿಗಳಿಗೆ ಹಾಗೂ ಹೋಬಳಿ ಗಳಿಗೆ ಪ್ರಯಾಣಿಸುವವರಿಗೆ ಮುಖ್ಯ ಬಸ್ ನಿಲ್ದಾಣವಾಗಿದೆ ಹಾಗೂ ಹಲವಾರು ಸರ್ಕಾರಿ ಹಾಗು ಖಾಸಗಿ ಶಾಲೆಗಳು ಕಾಲೇಜುಗಳು,ಕಛೇರಿ,ಬ್ಯಾಂಕುಗಳಿಗೆ,ಮಾರುಕಟ್ಟೆಗೆ ದಿನನಿತ್ಯ ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯಾಣ ಮಾಡಬೇಕು ಆದರೆ ಈ ತಾಲ್ಲೂಕಿನ ಬಸ್ ನಿಲ್ದಾಣದ ಅವ್ಯವಸ್ಥೆ ನೋಡಿದರೆ ಒಂದೂ ಸರಿಯಿಲ್ಲ
ಬೇಸಿಗೆಯ ಬಿಸಿಲಿನ ತಾಪಕ್ಕೆ ಮಕ್ಕಳು ವೃದ್ಧರು ಆಸ್ಪತ್ರೆ ಚಿಕಿತ್ಸೆಗೆ ಬಂದವರು ಇಲ್ಲಿಯೇ ಬಿಸಿಲಿನಲ್ಲಿ ಒಣಗಿಸಬೇಕು ಮಳೆಯಲ್ಲಿ ನೆನೆಯಬೇಕು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲ ನೆಲದಮೇಲೆ ಸುತ್ತ ಇರುವ ಕಟ್ಟೆ ಮೇಲೆ ಕೂರುವ ಪರಿಸ್ಥಿತಿ
ಬಸ್ ನಿಲ್ದಾಣ ಇರುವುದು ಬಸ್ ನಿಲ್ಲಿಸಲೋ ಅಥವಾ ಬೈಕ್ ಗಳ ನಿಲ್ದಾಣಕ್ಕೊ ಒಂದೂ ಗೊತ್ತಿಲ್ಲ ನಿಲ್ದಾಣದ ಒಳಗೆ ಬೈಕ್ ಗಳ ಪಾರ್ಕಿಂಗ್ ಆಗಿದೆ. ಸರ್ಕಾರಿ ಬಸ್ ಗಳು ಆಲೂರು ಬಸ್ ನಿಲ್ದಾಣಕ್ಕೆ ಬರದೇ ಬೈರಾಪುರ ಬೈಪಾಸ್ ರಸ್ತೆಯಲ್ಲಿ ನೇರವಾಗಿ ಹೋಗುವ ಬಸ್ ಗಳಿಗೆ ಏನು ಕೊರತೆ ಇಲ್ಲ ಎಷ್ಟೋ ಬಾರಿ ಮನವಿ ಪ್ರತಿಭಟನೆ ಮಾಡಿದರು ಒಂದೆರಡು ದಿನ ಮಾತ್ರ ಬಸ್ ಗಳು ಬರುತ್ತವೆ ಅಷ್ಟೆ
ಇಷ್ಟೆಲ್ಲಾ ಸಮಸ್ಯೆ ಇದ್ದರು ಸಹ ಸಂಬಂಧ ಪಟ್ಟವರು ಏನು ತಿಳಿಯದ ಹಾಗೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಇನ್ನಾದರೂ ಸಮಸ್ಯೆ ಬಗೆಹರಿಸುತ್ತಾರ ಕಾದು ನೋಡಬೇಕು ಎಂದು ವಿಜಯ್ ಆಲೂರುರವರು ತಮ್ಮ ಅಳಲು ತೋಡಿಕೊಂಡಿದ್ದಾರೆ.



