ಸಕಲೇಶಪುರ : ಕ.ರ.ವೇ.ಪ್ರವೀಣ್ ಶೆಟ್ಟಿ ಬಣ ತಾಲ್ಲೂಕು ಘಟಕದಿಂದ ಈ ದಿನ ಯಸಳೂರಿನಲ್ಲಿ ಕಾಡಾನೆ ಯೊಂದಿಗೆ ಕಾರ್ಯಾಚರಣೆ ಮಾಡುವಾಗ ವೀರ ಮರಣ ಹೊಂದಿದ ಅರ್ಜುನ 1990 ರಿಂದ 2023 ರ ವರೆಗೆ ಮೈಸೂರ್ ದಸರಾ ದಲ್ಲಿ ಪಾಲ್ಗೊಂಡು ಹಾಗು 8 ಬಾರಿ ಅಂಬಾರಿ ಹೊತ್ತ ಮಹಗಾಂಭೀರ್ಯ ಹೊತ್ತ ಗಜ ಪಡೇ ಅರಸ ಅವರ ಸಮಾಧಿ ಬಳಿಯಲ್ಲಿ ಪೂಜೆ ಯನ್ನು ಸಲ್ಲಿಸಲಾಯಿತು.

ಮತ್ತು ಅರ್ಜುನನ ಸಮಾಧಿಯ ಜಾಗಕ್ಕೆ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು ಖಂಡನೀಯ ಇದರ ವಿರುದ್ಧವಾಗಿ ಕ.ರ.ವೇ ರಮೇಶ್ ಪೂಜಾರಿ ಅವರ ನೇತೃತ್ವ ದಲ್ಲಿ ಸ್ಥಳೀಯ ಜನರು ಹಾಗು ಯುವಕರು ಅಲ್ಲಿನ ಸಮಸ್ಯೆ ಗಳನ್ನು ಸರಿ ಪಡಿಸಿ ಕೊಡಬೇಕೆಂದು ಅಧ್ಯಕ್ಷರಿಗೆ ಮನವಿ ಮಾಡಲಾಯಿತು.

ಅರಣ್ಯ ಇಲಾಕೆಯು ನಿರ್ಲಕ್ಷ್ಯ ತೋರಿದಲ್ಲಿ ಅದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಕ.ರ.ವೇ.ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *