ಹಾಸನ: ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ ಎಸ್ ಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2023-24ರ ಅಂಗವಾಗಿ ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕೀಟ ಬಲೆಗಳ ಅನುಸ್ಥಾಪನೆ ಮತ್ತು ಅವುಗಳ ಪ್ರಾಮುಖ್ಯತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಕೃಷಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುನೀತ.ಟಿ.ಆರ್ (ಕೀಟಶಾಸ್ತ್ರ ವಿಭಾಗ) ಹಾಗು ಡಾ.ಪ್ರಮೋದ್.ಜಿ( ಬೇಸಾಯಶಸ್ತ್ರ ವಿಭಾಗ) ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ಇವರೊಂದಿಗೆ ಫಾರ್ಮ್ ರೂಟ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್ ನ ಸಿಬ್ಬಂದಿಗಳು ಆಗಮಿಸಿದ್ದರು.

ಪ್ರಮುಖ ಕೀಟ ಬಲೆಗಳಾದ ಅಂಟು ಬಲೆ, ಮೋಹಕ ಬಲೆ, ಕೊಳವೆ ಬಲೆ, ಫ್ರೂಟ್ ಫ್ಲೈ ಬಲೆ ಹಾಗೂ ಬಕೆಟ್ ಬಲೆಗಳ ಬಗ್ಗೆ ತಿಳಿಸಿದರು.

ಹಳದಿ ಅಂಟು ಬಲೆಯನ್ನು ಹೇನುಗಳಿಗೆ , ಬಿಳಿಹುಳ ಮತ್ತು ಜಿಗಿಯುವ ಹುಳುಗಳಿಗೆ, ನೀಲಿ ಅಂಟು ಬಲೆಯನ್ನು ತ್ರಿಪ್ಸ್ ಗಳಿಗೆ, ಬಕೆಟ್ ಬಲೆಯನ್ನು ಕೆಂಪು ಮುತಿಹುಳುವಿಗೆ ಹಾಗೂ ಮೋಹಕ ಬಲೆಯನ್ನು ಪಾತಂಗಗಳಿಗೆ ಉಪಯೋಗಿಸಬೇಕೆಂದು ತಿಳಿಸಿಕೊಟ್ಟರು.

ಈ ಬಲೆಗಳನ್ನು ಉದಾರಣೆಯ ರೂಪದಲ್ಲಿ ಅನುಸ್ಥಾಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *