ಬೇರು ಉಣ್ಣಿಸುವಿಕೆ ಎಂದರೆ ಮರದ ನೆಲದ ಅಡಿಯಲ್ಲಿ ಇರುವ ಮೂಲಗಳಿಗೆ ನೇರವಾಗಿ ಪೋಷಕಾಂಶಗಳನ್ನು ಒದಗಿಸುವ ಪ್ರಕ್ರಿಯೆ. ಇದರಿಂದ ಮರವು ರೋಗನಿರೋಧಕ ಹಾಗೂ ಉತ್ತಮವಾಗಿ ಬೆಳೆಯುತ್ತದೆ.

ಹಾಸನ:- ಕರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಹಾರ್ನ್ಸ್) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2024-25ರ ಅಂಗವಾಗಿ ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ರೋಗಗ್ರಸ್ತ ತೆಂಗಿನ ಮರಗಳಿಗೆ ಬೇರು ಉಣ್ಣಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು .ವಿದ್ಯಾರ್ಥಿಗಳು ಶಿಬಿರದ ಆರಂಭದಲ್ಲಿ ಮಾಹಿತಿ ಸಂಗ್ರಹಣೆಗಾಗಿ ಬಂದ ಸಮಯದಲ್ಲಿ ಹೆಚ್ಚಿನ ತೆಂಗು ಬೆಳೆಗಾರರು ತೆಂಗಿನ ಕಾಂಡ ಸೋರುವಿಕೆ ರೋಗದ ಬಗ್ಗೆ ತಿಳಿಸಿದರು .

ಇದಕ್ಕಾಗಿ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಪದ್ಧತಿ ಪ್ರಾತ್ಯಕ್ಷಿಕೆಯನು ಕೈಗೊಂಡರು. ಮೊದಲಿಗೆ ರೋಗಗ್ರಸ್ತ ಮರದಿಂದ ಮೂರು ಮೀಟರ್ ದೂರದಲ್ಲಿ ಪೆನ್ಸಿಲ್ ಗಾತ್ರದ ಜೀವಂತ ಬೇರನು ಗುರುತಿಸಬೇಕು , ಆ ಬೇರು ಇಟ್ಟಿಗೆ ಬಣ್ಣದಾಗಿದು ಅದನು ಇಳಿ (ಸ್ಲಾಂಟ್)ಆಗಿ ಕತ್ತರಿಸಬೇಕು ,ನಂತರ ಒಂದು ಪ್ಲಾಸ್ಟಿಕ್ ಕವರ್ ಗೆ 5ಮಿಲಿ contaf plus (hexaconazol) ಅನ್ನು 100ಮಿಲಿ ನೀರಿನಲ್ಲಿ ಮಿಶ್ರಣ ಮಾಡಿ ಅದನು ಬೇರಿಗೆ ಕಟ್ಟಬೇಕು , ಸಂಜೆ ಹೊತ್ತಿಗೆ ಆ ಔಷಧಿಯನು ಬೇರು ಹಿರಿಕೊಂಡಿರುತ್ತದೆ.

ಈ ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೇಕೆರೆ , ಹಾಸನದ ಸಸ್ಯ ರೋಗ ಶಾಸ್ತ್ರ ವಿಭಾಗದ ಡಾ.ಚೆನ್ನಕೇಶವ ಸಿ ಉಪಸ್ಥಿತರಿದ್ದರು .ಸಸ್ಯ ರೋಗ ತಜ್ಞರಾದ ಡಾ ಚೆನ್ನಕೇಶವರವರು ಮಾತನಾಡಿ ಕಾಂಡ ರಸ ಸೋರುವಿಕೆ ರೋಗದ ಗುಣಲಕ್ಷಣ , ಹರಡುವಿಕೆ, ರೋಗ ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡಿ ಪ್ರಮುಖ ನಿಯಂತ್ರಣ ಕ್ರಮವಾದ ಬೇರು ಉಣ್ಣಿಸುವಿಕೆ ಬಗ್ಗೆ ರೈತರ ಸಮುಖದಲ್ಲಿ ಪದ್ಧತಿ ಪ್ರಾತ್ಯಕ್ಷಿಕೆ ಕೈಗೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *