
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಅಣಬೆ ಬೇಸಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಕುಮಾರ್ ವಾಗ್ಮಿ ಇವರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಅಣಬೆ ಬೇಸಾಯ ಎಂದರೇನು,ಇದರಿಂದಾಗುವ ಉಪಯೋಗಗಳೇನು ಎಂಬುದನ್ನು ರೈತರಿಗೆ ತಿಳಿಸಿಕೊಟ್ಟರು.
ಹಾಗೂ ಅಣಬೆ ಬೇಸಾಯವು ಕಡಿಮೆ ವೆಚ್ಚ ಹೊಂದಿದ್ದು ಇದರಿಂದ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಹಾಗೂ ಅಣಬೆ ಬೇಸಾಯವನ್ನು ಮಾಡುವ ವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳು ಅಣಬೆ ಬೇಸಾಯ ಅಳವಡಿಸಿಕೊಳ್ಳುವುದು ಉತ್ತಮ ಮತ್ತು ರೈತರಿಗೆ ಇದ್ದ ಸಂಶಯಗಳನ್ನು ಬಗೆಹರಿಸಿದರು.ಹಾಗೂ ಅಣಬೆ ಬೇಸಾಯ ಮಾಡುವುದಕ್ಕಾಗಿ ಯಾವುದೇ ಸಂಶಯಗಳಿದ್ದಲ್ಲಿ ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು,ಪ್ರಗತಿ ಪರ ರೈತರು,ರೈತಮಹಿಳೆಯರು,ಹಾಗೂ ಕೆ ಹೊಸಹಳ್ಳಿಯ ಎಲ್ಲಾ ಜನಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
