ಹಾಸನ : ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ.ಸ್ಸಿ [ಹಾನ್ಸ್] ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಜೋಡಿಕೃಷ್ಣಾಪುರದಲ್ಲಿ ಜೈವಿಕ ಇಂಧನ ಮರಗಳ ಉಪಯೋಗ ಕಾರ್ಯಕ್ರಮವನ್ನು ಆಯೋಜಿಸಿದರು.

ಇತ್ತೀಚಿನ ದಿನಗಳಲ್ಲಿ ಅತಿಯಾದ ವಾಹನಗಳ ಸಂಕೆಯಿಂದ ಇಂಧನ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗೂತಿದ್ದು , ಇದನ್ನು ತಡೆಗಟ್ಟಲು ವಿಜ್ಞಾನವು ವಾಹನಗಳಿಗೆ ಮಾಲಿನ್ಯಕರವಲ್ಲದ ಜೈವಿಕ ಇಂಧನವನ್ನು ಮಿಶ್ರಣ ಮಾಡಿ ಬಳಸುವ ಸಲಹೆಯನ್ನು ನೀಡಿದ್ದಾರೆ. ಇದನ್ನು ಗ್ರಾಮಸ್ಥರಿಗೆ ಪರಿಚಯಿಸಲು ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಕೈಗೊಂಡರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಜೈವಿಕ ಇಂಧನ ಉಧ್ಯಾನದ ತಂತ್ರಜ್ಞರಾದ ರಘುಕುಮಾರ್ ರವರು ಹಾಗೂ ಗ್ರಾಮಸ್ಥರಾದ ಕುಮಾರ ಅಣ್ಣ ಮತ್ತು ವೆಂಕಟೇಶ್ ರವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಘುಕುಮಾರ್ , ಜೈವಿಕ ಇಂಧನ ಮರಗಳ ಮಹತ್ವ , ಉಪಯೋಗ ಹಾಗೂ ಅವುಗಳ ಉಪಉತ್ಪನ್ನಗಳ ಬಗ್ಗೆ ತಿಳಿಸಿದರು.

“ಮನೆಗೊಂದು ಮರ ಊರಿಗೊಂದು ವನ” ಎಂಬ ಗಾದೆಯಂತೆ ಎಲ್ಲರಲ್ಲೂ ಜೈವಿಕ ಇಂಧನ ಮರ ನೆಡಲು ಉತ್ತೇಜಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರಿಗೆ ಜೈವಿಕ ಇಂಧನ ಮರಗಳಾದ ಹೊಂಗೆ, ಜತ್ರೋಪ, ಸೀಮರೂಭಾ, ಬೇವು ಮತ್ತಿ ಇತರೆ ಮರಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ನೀಡಿ ಗ್ರಾಮಸ್ಥರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *