ಸಕಲೇಶಪುರ : ತಾಲ್ಲೂಕಿನ ದೋಣಿಗಾಲ್ ನಲ್ಲಿರುವ ಮಂಜರಾಬಾದ್ ಕೋಟೆಯನ್ನು ನೋಡಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ಅದು ಸಂತೋಷದ ಸಂಗತಿಯೇ, ಅದರೆ ಮಂಜರಾಬಾದ್ ಕೋಟೆಯನ್ನು ನೋಡಲು ಬರುವ ಪ್ರವಾಸಿಗರು ತಮ್ಮ ವಾಹನಗಳನ್ನು ಹೆತ್ತೂರಿಗೆ ಹೋಗುವ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಇಲ್ಲಿನ ಸ್ಥಳೀಯ ಗ್ರಾಮಗಳಿಂದ ಸಕಲೇಶಪುರ ಮತ್ತು ಇತರೆ ಸ್ಥಳಗಳಿಗೆ ದಿನನಿತ್ಯ ಓಡಾಡುವ ಶಾಲಾ ಮಕ್ಕಳು, ವಯೋವೃದ್ಧರು, ಗರ್ಭೀಣಿ ಸ್ತ್ರೀಯರಿಗೆ ಹಾಗೂ ಮಂಗಳೂರು ಹೆದ್ದಾರಿಯಲ್ಲಿ ಓಡಾಡುವ ಆಂಬುಲೆನ್ಸ್‌ಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಸದರಿ ಜಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿರುವುದಿಲ್ಲ.

ಹಾಗಾಗಿ ಇಲ್ಲಿ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಆಗುವವರೆಗೂ ಪ್ರವಾಸಿ ತಾಣವಾದ ಮಂಜರಾಬಾದ್ ಕೋಟೆಯನ್ನು ತಾತ್ಕಲಿಕವಾಗಿ ಬಂದ್‌ ಮಾಡಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿದ ನಂತರ ಪ್ರಾರಂಭಿಸುವುದು ಸೂಕ್ತ.

ಹಾಗೆಯೇ ಹೆತ್ತೂರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ NO PARKING ನಾಮಫಲಕ ಹಾಕಿ ಈ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ತಡೆಯಲು ಪೊಲೀಸರನ್ನು ನೇಮಿಸಬೇಕು. ಕಪ್ಪಳ್ಳಿಯಿಂದ ಹುಲ್ಲಳ್ಳಿಯವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಾರಾಂತ್ಯದಲ್ಲಿ ಏಕಮುಖ ಮಾಡಿಕೊಡಬೇಕಾಗಿ ಈ ಮೂಲಕ ತಮಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿ ಸ್ಥಳೀಯ ಗ್ರಾಮಸ್ಥರು ಹಾಗೂ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು.

ಈ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜುದೇವ್ ಹುಲ್ಲಹಳ್ಳಿ, ಕರುನಾಡ ರಕ್ಷಣಾ ಸೇನೆ ಸಂಸ್ಥಾಪಕ ಅಧ್ಯಕ್ಷ ಸಾಗರ್ ಜಾನೇಕೆರೆ, ಸಾಮಾಜಿಕ ಹೋರಾಟಗಾರ ಪೃಥ್ವಿ ಅವರೇಕಾಡು, ಪ್ರತಾಪ್, ಸಂದೇಶ್ HC,HM ಗುರುದೇವ್, ವಿಕ್ರಂ ಹುಲ್ಲಳ್ಳಿ, ಜಯೇಂದ್ರ ಐನಾರು, ಪುಟ್ಟರಾಜು ಮಳಲಿ, ಚಂದ್ರು, ತೇಜು ಸುಳ್ಳಕ್ಕಿ, ಯಶ್ವಂತ್ ಅರೆಕೆರೆ, ಪ್ರಸನ್ನ ಕುಣಿಗಲ್, ತಮ್ಮಯ್ಯ ನಾಗರಾಜು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *