ಅಸ್ಸಾಂ ಮೂಲದ ವಲಸೆ ಕಾರ್ಮಿಕರಾದ ಕಾಸೀಂ (35) ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಹಾಲಿಂ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ. ಬೈಕ್‌ನಲ್ಲಿದ್ದ ಮತ್ತೋರ್ವ ಮೆರದುಲ್ ತೀವ್ರವಾಗಿ ಗಾಯಗೊಂಡಿದ್ದು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆಯಲ್ಲಿ ಬರಗೂರು ಕಡೆಯಿಂದ ಬೈಕ್‌ನಲ್ಲಿ ಮೂವರು ಬರತ್ತಿರುವಾಗ ಅರಕಲಗೂಡು ಕಡೆಯಿಂದ ಬಂದ ಟಾಟಾ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆಡಿದ್ದು, ಕಾಸೀಂ ಸ್ಥಳದಲ್ಲೇ ಮೃತಪಟ್ಟಿದ್ದು ತಲೆಭಾಗ ಛಿದ್ರಗೊಂಡು ರಸ್ತೆಯ ತುಂಬಾ ಮೆದುಳಿನ ಭಾಗಗಳು ಬಿದ್ದಿದು ಕಣ್ಣಿನ ಗುಡ್ಡೆ ತಲೆಯಿಂದ ಬೇರ್ಪಟ್ಟು ರಸ್ತೆಯ ಹೊರಗಡೆ ಎಸೆಯಲ್ಪಟಿದ್ದು ನೋಡುಗರ ಎದೆ ಝೆಲ್ ಎನ್ನುವಂತೆ ಇತ್ತು.

ಶವಗಳನ್ನು ಪಟ್ಟಣದ ಸರ್ವಾಜನಿಕ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಅರಕಲಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *