
ಸಕಲೇಶಪುರ. ಸಂವಿಧಾನ ಓದು ಕರ್ನಾಟಕ ಸಂಘಟಕರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಜಸ್ಟಿಸ್ ನಾಗಮೋಹನ್ ರವರ ಮಾರ್ಗದರ್ಶನದಂತೆ ಆಯ್ದ ನೂರು ಜನಕ್ಕೆ ನವೆಂಬರ್ 8 ಮತ್ತು 9 ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಕಾಲ ಸಂವಿಧಾನ ಓದು ಅಧ್ಯಾಯನ ಶಿಬಿರವನ್ನು ಆಯೋಜಿಸಲಾಗಿದೆ.
ಈ ಒಂದು ವಿಶಿಷ್ಟ ಮತ್ತು ವಿನೂತನವಾದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು, ದಲಿತ ಸಂಘಟನೆಯ ಮುಖಂಡರು, ಅಲ್ಪಸಂಖ್ಯಾತ ಸಂಘಟನೆಗಳ ಮುಖಂಡರು, ಸಂವಿಧಾನ ಚಿಂತಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸಹಕರಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕಾಗಿ ಸಂವಿಧಾನ ಓದು ಕರ್ನಾಟಕದ ರಾಜ್ಯ ಸಂಘಟಕರಾದ ರಾಜು ಗೊರೂರು, ಜಿಲ್ಲಾ ಸಂಘಟಕರಾದ ರಾಜಶೇಖರ್ ಡಿ ಎಸ್, ರಾಜ್ಯ ಸಂಯೋಜಕರಾದ ಅಣ್ಣಯ್ಯ, ಜಿಲ್ಲಾ ಸಂಚಾಲಕರಾದ ನಾಗರಾಜ್, ತಾಲೂಕು ಸಂಚಾಲಕರಾದ ಧರ್ಮರಾಜ್, ಮನವಿ ಮಾಡಿಕೊಂಡಿರುತ್ತಾರೆ.
