
ಸಕಲೇಶಪುರ : ತಾಲ್ಲೂಕಿನ ಶಿರಾಡಿ ಘಾಟ್ ನಲ್ಲಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಭಾರಿ ಗಾತ್ರದ ಮರ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಬಿದ್ದ ಪರಿಣಾಮ ರಸ್ತೆ ಸಂಪೂರ್ಣವಾಗಿ ಬಂದ್ ಆಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ವಿಷಯ ತಿಳ್ಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆನೆಮಹಲ್ ಮೊಣು ಟೀಮ್ ಭಾರಿ ಗಾತ್ರದ ಮರವನ್ನು ಯಂತ್ರದ ಮೂಲಕ ಕಟ್ಟು ಮಾಡಿ ತೆರವು ಗೊಳಿಸಿ ವಾಹನಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಕೆಲಸಕ್ಕೆ ವಾಹನ ಸವಾರರು ಹಾಗೂ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
