ಸಕಲೇಶಪುರ .ಚಿಕ್ಕಮಗಳೂರಿನಲ್ಲಿ ದತ್ತಭಕ್ತರು ಆಯೋಜಿಸಿರುವ ದತ್ತಮಾಲ ಅಭಿಯಾನ ಕಾರ್ಯಕ್ರಮದಲ್ಲಿ ದೂರದ ಊರಿನಿಂದ ಬರುವ ದತ್ತಭಕ್ತರು ಅತ್ಯಂತ ಶ್ರದ್ಧೆಯಿಂದ ಮಾಲೆ ಧರಿಸಿ ಹನ್ನೊಂದು ದಿನಗಳ ಕಠಿಣ ವೃತಚಾರಣೆ ಮಾಡಿ ಭಜನೆ ಸಂಕೀರ್ತನೆಯಿಂದಲೇ ಶಕ್ತಿಯನ್ನು ಮೈಗೂಡಿಸಿಕೊಳ್ಳವ ಶ್ರೇಷ್ಠವಾದ ಪ್ರಕ್ರಿಯೆಯೇ ಭಜನೆ ಹಾಗೂ ಸಂಕೀರ್ತನು ದತ್ತಜಯಂತಿಯಲ್ಲಿ ಸರದಿ ಸಾಲಿನಲ್ಲಿ ಬರುವಾಗ ಸರ್ವೇ ಸಾಮಾನ್ಯವಾಗಿ ಭಕ್ತರು ಭಜನೆ ದತ್ತನಾಮ ಸಂಕೀರ್ತನೆ ಮಾಡುತ್ತಲೇ ಮನಸ್ಸಿನಲ್ಲಿ ಕೆಟ್ಟದನ್ನು ಆಲೋಚನೆ ಮಾಡದೇ ಅಧ್ಯಾತ್ಮಿಕದಲ್ಲಿ ಮಿಂದೆಳುವ ಭಕ್ತರಿಗೆ ಭಜನೆ ಮಾಡಬಾರದು ಎಂದು ಹೇಳಿಕೆ ನೀಡಿರೋದು ಆತಂಕಕಾರಿ ಬೆಳವಣಿಗೆ ಎಂದರು.

ಆಯುಧಗಳನ್ನ ಪಟಾಕಿ ಇತರೆ ಸ್ಪೊಟಕ ವಸ್ತುಗಳನ್ನ ತರಬಾರದು,ನ್ಯಾಯಾಲಯದ ಆದೇಶ ಪಾಲಿಸಬೇಕು, ಪಾದುಕೆ ಮುಟ್ಟಬಾರದು ಎಂಬ ಹೇಳಿಕೆ ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳ ಹೇಳಿಕೆ ನೀಡಲಿ . ಅದನ್ನು ಬಿಟ್ಟು ಕರ್ಪುರ ಹಚ್ಚಬಾರದು ಭಜನೆ ಮಾಡಬಾರದು ಎಂಬ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ದತ್ತಭಕ್ತರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ದತ್ತಪೀಠದ ಆವರಣದ ಒಳಗೆ ಹೋಗುವಗಿನಿಂದ ಹೊರಗೆ ಬರುವವವರೆಗೆ ಯಾವುದೇ ಭಜನೆ ಧ್ಯಾನ ಹೋಮ-ಹವನ ಮಾಡಬಾರದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ಅವರು ಪತ್ರಿಕಾ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದತ್ತಪೀಠ ಮುಕ್ತಿ ಹೋರಾಟಗಾರ ಹಾಗೂ ದತ್ತಭಕ್ತ ರಘು ಸಕಲೇಶಪುರ ಪತ್ರಿಕೆ ಹೇಳಿಕೆ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *