ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ “ಕೃಷಿಯ ಐಹಿಕ” ಎಂಬ ನಮಧ್ಯೇಯದಡಿ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮವನ್ನು ಹಾಸನದ ಕೃಷಿ ಕಾಲೇಜಿನ ಡೀನ್ ರಾದ ಡಾ.ಮುನಿಸ್ವಾಮಿಗೌಡ ರವರು ಗೋವುಗಳಿಗೆ ಮತ್ತು ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಉದ್ಘಾಟನೆಯನ್ನು ನೆರವೇರಿಸಿದರು.

ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ರೈತರಿಗೆ ವಿವಿಧ ವಿಷಯಗಳ ಬಗ್ಗೆ ತಿಳಿಸಲು ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಇದರಲ್ಲಿ ಗ್ರಾಮದ ಮಾಹಿತಿ ಒಳಗೊಂಡಂತೆ ವಿವಿಧ ರೀತಿಯ ಬೇಸಾಯ ಕ್ರಮಗಳು, ವಿವಿಧ ಬೀಜದ ತಳಿಗಳು, ಮಣ್ಣಿನ ಬಗ್ಗೆ, ಸಿರಿಧಾನ್ಯಗಳ ವಿವರ, ನೀರಾವರಿ ವಿಧಗಳು, ಸಾವಯವ ಕೃಷಿ, ರೇಷ್ಮೆ ಕೃಷಿ, ಜೇನು ಸಾಕಾಣಿಕೆ, ಹಸಿರುಮನೆಯ ವಿವರ, ಕೃಷಿ ಮುನ್ನಡೆ ಹಾಗೂ ಮುಂತಾದ ವಿಷಯಗಳ ಮಾದರಿಯನ್ನು ಪ್ರದರ್ಶಿಸಿದರು.

ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಸಂಯೋಜಕರಾದ ಡಾ.ಶಂಕರ ಎಮ್.ಎಚ್ ಹಾಗೂ ಜೋಡಿಕೃಷ್ಣಾಪುರಾದ ಸಹಸಂಯೋಜಕರಾದ ಡಾ.ಅರವಿಂದ ಕುಮಾರ್ ಎಮ್.ಕೆ ಸೇರಿದಂತೆ ಸಹಪ್ರಧ್ಯಾಪಕರುಗಳಾದ ಡಾ.ಶಶಿಕಿರಣ್, ಡಾ.ನಟರಾಜ್, ಡಾ.ಬಸವರಾಜು, ಡಾ.ಪ್ರಮೋದ್, ಡಾ.ಸದಾಶಿವನಗೌಡ, ರೇಖಾ, ಅಭಿಲಾಷ, ಡಾ.ವಿನೋದ ಶಂಕರ್ ನಾಯಕ್, ಪ್ರಾಥಮಿಕ ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ಈ ಕೃಷಿ ಮಾಹಿತಿ ಕೇಂದ್ರವು ಉದ್ಘಾಟನೆ ದಿನದಿಂದ ನವೆಂಬರ್ 5 ರ ವರೆಗೆ ಕಾರ್ಯನಿರ್ವಹಿಸುತ್ತದೆ. ಈ ಮಾಹಿತಿ ಕೇಂದ್ರವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *