“ಹಾಸನ : ಆಹಾರ ಸಂರಕ್ಷಣೆ ಎಂದರೆ ಆಹಾರವು ಹಾಳಾಗುವುದನ್ನು ತಡೆಗಟ್ಟಲು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬಳಸುವ ಅಥವಾ ನಿರ್ವಹಿಸುವ ಕ್ರಿಯಾಯವಾಗಿದೆ.

ಆಹಾರದ ಲಭ್ಯತೆ ಕುರಿತು ಮತ್ತು ಹರಡುವ ಕಾಯಿಲೆಗಳನ್ನು ಕುರಿತು ಶಿಬಿರಾರ್ಥಿಯಾದ ಪುನೀತ್ ಗೌಡ ರವರು ತಿಳಿಸಿದರು.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ಆಹಾರ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿಶ್ವನಾಥ್ ಅಂಗಡಿ, ಸಹಾಯಕ ಪ್ರಾಧ್ಯಾಪಕರು ಆಹಾರ ಸೂಕ್ಷ್ಮಜೀವಿಗಳ ವಿಭಾಗ, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಹಾರ ಸಂರಕ್ಷಣೆಯ ಮಹತ್ವ ಮುತ್ತು ವಿಧಾನಗಳನ್ನು ತಿಳಿಸಿಕೊಟ್ಟರು.

ಆಹಾರ ಸಂರಕ್ಷಣೆಯ ಮಾಹಿತಿ ನೀಡಿದ ನಂತರ ರೈತರು ಕೇಳಿದ ಪ್ರಶ್ನೆಗಳಿಗೆ ಡಾ. ವಿಶ್ವನಾಥ್ ಅಂಗಡಿ ರವರು ಬಹಳ ಸಮಂಜಸವಾಗಿ ಉತ್ತರಿಸುವುದರ ಮೂಲಕ ಆಹಾರ ಸಂರಕ್ಷಣೆಯ ವಿಧಾನಗಳನ್ನು ರೈತರಲ್ಲಿ ಮನವರಿಕೆ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಡಾಕ್ಟರ್ ವಿಶ್ವನಾಥ್ ಅಂಗಡಿ ಸಹಾಯಕ ಪ್ರಾಧ್ಯಾಪಕರು, ಆಹಾರ ಸೂಕ್ಷ್ಮಜೀವಿಗಳ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನ ಹಾಗೂ ಕೊರವಂಗಲ ಗ್ರಾಮದ ಮುಖಂಡರು ಭಾಗವಹಿಸಿದ್ದರು. ಅಂತಿಮ ವರ್ಷದ ಕೃಷಿ ಮತ್ತು ಆಹಾರ ತಂತ್ರಜ್ಞಾನದ ವಿಭಾಗದ ಶಿಬಿರಾರ್ಥಿಗಳು ಹಾಗೂ ಎಲ್ಲಾ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಈ ಉಪಯುಕ್ತವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೆಲ್ಲರೂ ಬಹಳ ಸಂತೋಷ ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *