
ಆಲೂಗಡ್ಡೆ ಕುಡಿ ಕಾಂಡ ತಂತ್ರಜ್ಞಾನದ ಬಗ್ಗೆ ಅರಿವು:-
ಹಾಸನ : ಕುಡಿ ಕಾಂಡ ತಂತ್ರಜ್ಞಾನವನ್ನು ಅನುಸರಿಸುವ ಮೂಲಕ ರೈತರು ಉತ್ತಮ ಉತ್ಪಾದನೆ , ಕಡಿಮೆ ವೆಚ್ಚ ಮತ್ತು ಉತ್ತಮ ಗುಣಮಟ್ಟ ಆಲೂ ಗಡ್ಡೆಯನ್ನು ಪಡೆಯಬಹುದು .ಇದರಿಂದಾಗಿ ರೈತರ ಆದಾಯವು ಹೆಚ್ಚಳವಾಗುತ್ತದೆ ಎಂದು ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ರೈತರಿಗೆ ತಿಳಿಸಿದರು .
ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ಹಾನ್ಸ್ ಕೃಷಿ ವಿದ್ಯಾರ್ಥಿಗಳು ಹಾಗೂ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ “ಅಂಗಾಂಶ ಕೃಷಿ ಆಲೂಗೆಡ್ಡೆ ಕುಡಿ ಕಾಂಡ ತಂತ್ರಜ್ಞಾನ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಡಾ॥ ಆಕಾಶ್ ಜೈವಿಕ ತಂತ್ರಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಅವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು .ಕಾರ್ಯಕ್ರಮದಲ್ಲಿ ಅವರು ಕೃಷಿಯಲ್ಲಿ ಅಂಗಾಂಶ ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು ರೋಗ ರಹಿತ ಆಲೂಗೆಡ್ಡೆ ಸಸಿಗಳನ್ನು ಪ್ರಯೋಗಾಲಯದಲ್ಲಿ ಅಂಗಾಂಶ ತಂತ್ರಜ್ಞಾನದ ಮೂಲಕ ಹೊಸ ಸಸಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಹಾಗೂ ಈ ತಂತ್ರಜ್ಞಾನದ ಅನುಕೂಲಗಳನ್ನು ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
