ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಅಜೋಲಾ ಬೇಸಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸದಾಶಿವನಗೌಡ ಎಸ್ ಎನ್ ಒ ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ.ಕೃಷಿ ವಿಧ್ಯಾರ್ಥಿಗಳು ಅಜೋಲಾ ಬೇಸಾಯ ಪದ್ಧತಿಯು ಅತ್ಯುತ್ತಮ ಕಡಿಮೆ ಖರ್ಚಿನ ಹೆಚ್ಚಿನ ಆದಾಯ ಗಳಿಸಬಹುದಾದ ಪದ್ಧತಿಯಾಗಿದೆ.

ಅಜೋಲಾ ಬೇಸಾಯ ಅಳವಡಿಸಿಕೊಳ್ಳುವುದರಿಂದ ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ತಿಳಿಸಿದರು.

ಅಜೋಲಾ ಹೆಚ್ಚಿನ ಕೊಬ್ಬಿನಾಂಶ ಹೊಂದಿದೆ,ಅದಲ್ಲದೆ ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚುತ್ತದೆ.ಅಜೋಲಾ ಬೇಸಾಯವನ್ನು ಅಳವಡಿಸಿಕೊಳ್ಳಿ ಎಂದು ರೈತರಿಗೆ ವಿದ್ಯಾರ್ಥಿಗಳು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು,ಪ್ರಗತಿ ಪರ ರೈತರು,ರೈತಮಹಿಳೆಯರು,ಹಾಗೂ ಕೆ ಹೊಸಹಳ್ಳಿಯ ಎಲ್ಲಾ ಜನಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *