
ರಾಗಿಯು ಹೃದಯದ ದೌರ್ಬಲ್ಯ ಮತ್ತು ಅಸ್ತಮಾವನ್ನು ಕಡಿಮೆ ಮಾಡುತ್ತದೆ. ರಾಗಿಯಿಂದ ಮಾಡಿದ ಆಹಾರ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ.
ಹಾಸನ : ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಹಾನರ್ಸ್) ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೫ ರ ಅಂಗವಾಗಿ ರಾಗಿ ಮತ್ತು ಹಾಲಿನ ಮೌಲ್ಯವರ್ಧನೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ರಾಗಿ ಇಲ್ಲಿನ ಮುಖ್ಯ ಬೆಳೆ ಆಗಿದ್ದು ಅದರಿಂದ ರಾಗಿ ಬರ್ಫಿ, ರಾಗಿ ಲಡ್ಡು, ರಾಗಿ ಮಾಲ್ಟ್, ಹಾಗೂ ಹಾಲಿನ ಮೌಲ್ಯವರ್ಧಕ ಉತ್ಪನ್ನಗಳಾದ ಪನೀರ್ ಮತ್ತು ಖೋವಾಗಳ ಬಗ್ಗೆ ತಿಳಿಸಿಕೊಟ್ಟರು . ಹಾಗೆಯೆ ರಾಗಿ ಬರ್ಫಿ ತಯಾರಿಕೆಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಡಾ.ಬನು ದೇಶಪಾಂಡೆ ( ಮೌಲ್ಯ ವರ್ಧನೆ), ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ರಾಗಿ ಬರ್ಫಿ ಅನ್ನು ಹಂಚುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
