ಹಾಸನ : ಹೊಸ ತಳಿಗಳು ಮತ್ತು ಸಂಕರ ತಳಿಗಳ ಅಭಿವೃದ್ಧಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ. ಇವು ಹೆಚ್ಚಿನ ಬೆಳೆ ಉತ್ಪಾದನೆ, ರೋಗ ನಿರೋಧಕ ಶಕ್ತಿ, ಹವಾಮಾನ ಸಹಿಷ್ಣುತೆ ಮತ್ತು ಉತ್ತಮ ಪೋಷಕಾಂಶಗಳನ್ನು ನೀಡಲು ಸಹಕಾರಿ ಎಂದು ಶಿಬಿರಾರ್ಥಿನಿಯಾದ ದಿಶಾ ರವರು ತಿಳಿಸಿದರು.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ  ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ  ನೂತನ ತಳಿಗಳು ಹಾಗೂ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕರದ  ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ  ಸಂಪನ್ಮೂಲ ವ್ಯಕ್ತಿಗಳಾಗಿ  ಡಾ.ಮಧುಸೂದನ್, ಸಹಾಯಕ ಪ್ರಾಧ್ಯಾಪಕರು,ಅನುವಂಶೀಯತೆ ಮತ್ತು  ಸಸ್ಯ ತಳಿ ಅಭಿವೃದ್ಧಿ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಸನ ರವರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೊಸ ತಳಿಗಳು ರೈತರ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಆಹಾರ ಭದ್ರತೆ, ಪರಿಸರಸ್ನೇಹಿ ಕೃಷಿ ವಿಧಾನಗಳು, ಮತ್ತು ಬೆಳೆಗಳಿಗೆ ಬೇರೆಬೇರೆ ಪರಿಸ್ಥಿತಿಗಳಲ್ಲಿ ಬಾಳಿಕೆ ನೀಡುತ್ತವೆ ಎಂದು ಹೇಳಿದರು. ರೈತರು ಸ್ವತಃ ಸಂರಕ್ಷಿಸಿದ ತಳಿಗಳನ್ನು ಲೇಬಲ್ ಮಾಡದೆ ಬಳಸಬಹುದು ಮತ್ತು ಮಾರಬಹುದು ಎಂಬುದರ ಬಗ್ಗೆ  ತಿಳಿಸಿದರು.

ಹಾಗೂ ತಳಿಗಳನ್ನು ಸಂರಕ್ಷಸಿದ ರೈತರಿಗೆ ಸರ್ಕಾರದ ವತಿಯಿಂದ ಬಹುಮಾನ ದೊರೆಯುತ್ತದೆ ಎಂದು ಹೇಳಿದರು. ನಂತರ ಸಸ್ಯ ವಿವಿಧತೆಗಳ ಸಂರಕ್ಷಣಾ ಮತ್ತು ರೈತರ ಹಕ್ಕುಗಳು ಕಾಯ್ದೆ (PVFRA) ಬಗ್ಗೆ ಕೂಡ ಗ್ರಾಮದ ಎಲ್ಲಾ ರೈತರಿಗೂ ಮಾಹಿತಿ ನೀಡಿ ರೈತರಿಗೆ ಈ ಕಾಯ್ದೆ ಬಗ್ಗೆ ಮನವರಿಕೆ ಮಾಡಿಸಿದರು.

ನಂತರ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕಾರ್ಯಕ್ರಮವನ್ನು ಮತ್ತಷ್ಟು ಆಸಕ್ತಿದಾಯಕವನ್ನಾಗಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *