
ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯ ಒಕ್ಕಲಿಗರ ಸಮುದಾಯ ಭವನದ ಎದುರು ಇಂದು ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್ ಕುಮಾರ್‌ರವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಕಲೇಶಪುರ ಕ್ಷೇತ್ರದ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವತಃ ಅವರೇ ಅನ್ನದಾನ ಮಾಡಿದ್ದು, ಅಪ್ಪು ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ಈ ಕಾರ್ಯಕ್ರಮಕ್ಕೆ ಬಂದ ನೂರಾರು ಅಪ್ಪು ಅಭಿಮಾನಿಗಳಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬಾಲು, ವಿನಯ್ ಕಾಂಬ್ಳಿ, ಭರತ್ ತರಕಾರಿ, ದಿಲೀಪ್ ಪೆಟ್ರೋಲ್ ಬಂಕ್, ರೋಹಿತ್, ಶ್ರೀಧರ್, ಜಗ್ಗ, ರಘು, ಕಿರಣ್ ಚೌತಿ ಇತರೆ ಅಪ್ಪು ಅಭಿಮಾನಿಗಳು ಇದ್ದರು.





