ಸಕಲೇಶಪುರ :- ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಸಂಭ್ರಮದಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ವಿದ್ಯಾರ್ಥಿಗಳಿಂದ ಶುಕ್ರವಾರಸಂತೆಯ ರಥ ಬೀದಿಯಲ್ಲಿ ಸ್ತಬ್ದ ಚಿತ್ರ ಮೆರವಣಿಗೆ ನಡೆಸಲಾಯಿತು.

ಇದರಲ್ಲಿ ಶಾಲಾ ಮಕ್ಕಳ ಯಕ್ಷಗಾನ, ಡೊಳ್ಳುಕುಣಿತ, ವೀರಗಾಸೆ, ಹುಲಿವೇಶ, ಕಾಡುಜನರವೇಷ, ಲಂಬಾಣಿನೃತ್ಯ, ನವಿಲುಕುಣಿತ, ಹಾಗೂ ಕನ್ನಡ ಭಕ್ತಿಯನ್ನು ಸಾರುವ ಹಡುಗಳಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದವರನ್ನು ಮನಸುರೆಗೊಳಿಸಿದವು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *