
ಸಕಲೇಶಪುರ :- ತಾಲ್ಲೂಕಿನ ಯಸಳೂರು ಹೋಬಳಿಯ ಉಚ್ಚಂಗಿಯ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಿಜೆಪಿ ತಾಲ್ಲೂಕು ಎಸ್.ಸಿ ಮೋರ್ಚಾ ಕಾರ್ಯದರ್ಶಿ ನಾಗನಹಳ್ಳಿ ಮಧು ಅವರು ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಉಚ್ಚಂಗಿಯ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಸಾದ್, ಉಚ್ಚಂಗಿಯ ಬಿಜೆಪಿ ಮಹಾಶಕ್ತಿ ಅಧ್ಯಕ್ಷರಾದ ಸವಿನ್ ಗೌಡ, ಬಿ ಜೆ ಪಿ ಮುಖಂಡರು ಉಚಾಂಗಿ ರವಿ, ಹಿರಿಯರಾದ ಥಮ್ಮೆಗೌಡ, ಬಿಜೆ ಪಿ ಎಸ್ ಸಿ ಮೋರ್ಚಾ ಕಾರ್ಯದರ್ಶಿ ನಾಗನಹಳ್ಳಿ ಮಧು ಇದ್ದರು.



