ಸಕಲೇಶಪುರ : ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್ ಅವರ 273 ನೇ ಜಯಂತಿ ಕಾರ್ಯಕ್ರಮವನ್ನು ಮಂಜ್ರಾಬಾದ್ ದರ್ಗಾದಲ್ಲಿ ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಯೆಡೆಹಳ್ಳಿ ಆರ್ ಮಂಜುನಾಥ್ ಮಾತನಾಡಿ ದೇಶಕಂಡ ಮಹಾನ್ ದೇಶಪ್ರೇಮಿ ಟಿಪ್ಪುಸುಲ್ತಾನ್ ಅವರು ಸಮಾಜದ ಜನರ ರಕ್ಷಣೆಗಾಗಿ ತಮ್ಮ ಮಕ್ಕಳನ್ನೆ ಬ್ರಿಟೀಷರಿಗೆ ಒತ್ತೆಇಟ್ಟಂತ ಯಾರಾದರು ದೇಶದಲ್ಲಿ ಇದ್ದರೆ ಅದು ಟಿಪ್ಪುಸುಲ್ತಾನ್ಅವರು ಟಿಪ್ಪು ಅವರು ಒಬ್ಬ ಮಹಾನ್ ದೇಶಪ್ರೆಮಿಯಾಗಿ, ಆರ್ಥಿಕ ತಜ್ಞರಾಗಿ ,ರೈತರ ,ಬಡವರ ಪರ ದ್ವನಿಯಾದವರು ಅಂತಹರನ್ನು ಒಂದು ಧರ್ಮದ ಚೌಕಟ್ಟಿನ ನೆಲೆಗಟ್ಟಿನಲ್ಲಿ ನೋಡುವ ಮೂಲಕ ಅವರನ್ನು ಒಬ್ಬ ಹಿಂದೂ ವಿರೋದಿ ರಾಜ ಎಂಬುದಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಗಳನ್ನು ಮಲ್ನಾಡ್ ಮೆಹಬೂಬ್ ಹಂಚಿಕೊಂಡರೆ ಮುಖ್ಯ ಅತಿಥಿಗಳಾಗಿ ಹಿರಿಯ ದಸಂಸ ಹೋರಾಟಗಾರ ರಾಜಶೇಖರ್, ಮುಸ್ಲಿಂ ಧರ್ಮಗುರುಗಳಾದ ಇಬ್ರಾಹಿಂ ಮುಸ್ಲಿಯಾರ್, ಜೈಭೀಮ್ ಮಂಜು, ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಮುಖಂಡರು ಆನೆಮಹಲ್ ಹಸೈರ್, ಹನೀಫ್, ಅಕ್ರಂ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *