
ಸಕಲೇಶಪುರ : ಸ್ನೇಹಿತರ ಬಳಗ ” ವತಿಯಿಂದ ಎರಡನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಈ ತಿಂಗಳ 29-11-2024 ನೇ ಶುಕ್ರವಾರದಂದು ಬೆಳಗ್ಗೆ 9 ಗಂಟೆ ಯಿಂದ ಸಂಜೆ 3 ಗಂಟೆವರೆಗೆ ವಳಲಹಳ್ಳಿ ಕೂಡಿಗೆಯ ಹೆಚ್.ಡಿ ದೇವೇಗೌಡ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಳೆದ ಬಾರಿ 250ಕ್ಕೂ ಹೆಚ್ಚು ಜನರು ತಪಾಸಣೆಗೆ ಬಂದು 110 ಕನ್ನಡಕ (ರೀಡಿಂಗ್ ಗ್ಲಾಸ್ only ) ಹಾಗೂ 56 ಮಂದಿ ಕಣ್ಣಿನ ತಪಾಷಣೆಗೆ ತೆರಳಿ 40 ಮಂದಿ ಯಶಸ್ವಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಬಂದಿದ್ದಾರೆ.
ಈ ಬಾರಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಜೊತೆಗೆ ಬಿಪಿ, ಶುಗರ್ ಸಂಬಂಧಿಸಿದಂತೆ ತಪಾಸಣೆಯ ಸೌಲಭ್ಯವಿದೆ. ಸುತ್ತಮುತ್ತಲಿನ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗವನ್ನು ಪಡೆದುಕೊಳ್ಳುವಂತಾಗಲಿ.
ವಿಶೇಷ ಸೂಚನೆ: ಶಿಬಿರ ನಡೆದ ದಿನವೇ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಆದ ಬಳಿಕ ನಿಮ್ಮ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆಯ ಉಚಿತ ಬಸ್ ಸೌಕರ್ಯವಿರುತ್ತದೆ. ಶಿಬಿರಕ್ಕೆ ರೋಗಿಗಳು ಬರುವಾಗ ತಲೆಗೆ ಸ್ನಾನ ಮತ್ತು ಪುರುಷರು ಮುಖ ಕ್ಷೌರ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ ಬರಬೇಕು.
ಆಸ್ಪತ್ರೆಯಲ್ಲಿ ಉಚಿತ ಊಟದ ಸೌಲಭ್ಯ ಇರುತ್ತದೆ.ಆಸ್ಪತೆಯಲ್ಲಿ 2 ದಿನಗಳ ಮಟ್ಟಿಗೆ ತಂಗಲು ಬೇಕಾಗುವ ಟವಲ್ ಸೋಪು, ಬಪ್, ಬಟ್ಟೆ, ತಟ್ಟೆ, ಲೋಟ ಇತ್ಯಾದಿಗಳನ್ನು ತರುವುದು.
ಸೂಚನೆ :- ಆಧಾರ್ ಕಾರ್ಡ್ (ಜೆರಾಕ್ಸ್ 2ಪ್ರತಿ) ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ತರಬೇಕು. ಯಶಸ್ವಿನಿ ಕಾರ್ಡ್ ಮತ್ತು ಧರ್ಮಸ್ಥಳ ಸಂಘದ ಕಾರ್ಡ್ ಇರುವವರು ತರಬೇಕು.
ಸಂಪರ್ಕಿಸಿ :-ಹರೀಶ್ ಕರಡಿಗಾಲ :-6360594245 ನಾಗೇಶ್ ಕೆರೆಮನೆ :- 944955005 ಅರುಣ್ ಗೌಡ :- 9880585075, ನಂದೀಶ್ :- 9380983919, ಪ್ರಶಾಂತ್ :-8105700068
