
ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಮಾನಸಿಕ ತಜ್ಞ ವೈದ್ಯರಿಂದ ಇಂದು ಶಿಕ್ಷಕರಿಗಾಗಿ ವಿಶೇಷ ಮಾಹಿತಿ ಮತ್ತು ಅರಿವಿನ ಶಿಬಿರವನ್ನು ಇಂದು ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ರಕ್ಷಿದಿಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆ.ಎಂ.ಸಿ.ಮಣಿಪಾಲ್ ಆಸ್ಪತ್ರೆಯ ಡಾ.ಪ್ರವೀಣ್ ಮಾತನಾಡಿ ಮಾನಸಿಕ ಕಾಯಿಲೆಗಳು ವ್ಯಕ್ತಿಗಳಲ್ಲಿ ಇರುವುದು ಕಂಡು ಬಂದರೆ ವೈದ್ಯರ ಬಳಿ ಹೋಗಿ ಕೌನ್ಸಿಲಿಂಗ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಅದನ್ನು ಬಿಟ್ಟು ಇಂದು ನಮ್ಮ ಜನರು ಮಾಟ ಮಂತ್ರ ,ದೇವಸ್ಥಾನಗಳು ,ಚರ್ಚ್‌ಗಳು ಮಸೀದಿಗಳು ಎಂದೆಲ್ಲ ಹೋದರೆ ಪರಿಹಾರವಾಗುವುದಿಲ್ಲ ಹಾಗಾಗಿ ವ್ಯಕ್ತಿಗಳಲ್ಲಿ ನಾನಾ ರೀತಿಯ ಮಾನಸಿಕ ಕಾಯಿಲೆಗಳನ್ನು ಇಂದು ಕಾಣಬಹುದಾಗಿದೆ ಇದಕ್ಕೆ ಪರಿಹಾರ ಎಂದರೆ ಮಾನಸಿಕ ತಜ್ಞರೊಂದಿಗೆ ಸಮಾಲೋಚನೆ ಮಾಡುವುದು ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ . ಶಿಬಿರದಲ್ಲಿ ಪಾಲ್ಗೊಂಡ ಶಿಕ್ಷರಿಗೆ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ರಂಗಕರ್ಮಿ ಪ್ರಸಾದ್ ರಕ್ಷಿದಿ ಹಾಗೂ ಜೈಕರ್ನಾಟಕ ಸಂಘ ಬೆಳ್ಳೇಕೆರೆ ಇದರ ಪದಾಧಿಕಾರಿಗಳು, ಹಾಗೂ ಸದಸ್ಯರು ಹಾಜರಿದ್ದರು.
