ಸಕಲೇಶಪುರ : ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 13 ರ ಶುಕ್ರವಾರದಂದು ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಸಲು ಕಸಾಪ ತಾಲೂಕು ಘಟಕ ತೀರ್ಮಾನಿಸಿದ್ದು ಸಮ್ಮೇಳನದ ಸರ್ವಾದ್ಯಕ್ಷರಾಗಿ ರಂಗಕರ್ಮಿ, ಸಾಹಿತಿ, ಬರಹಗಾರರಾದ ಪ್ರಸಾದ್ ರಕ್ಷಿದಿ ಅವರನ್ನು ತಾಲೂಕು ಕಸಾಪ ಕಾರ್ಯಕಾರಿ ಮಂಡಳಿ ತೀರ್ಮಾನಿಸಿದ್ದು ಇಂದು ಅವರ ನಿವಾಸಕ್ಕೆ ತೆರಳಿ ಅದಿಕೃತವಾಗಿ ಅವರಿಗೆ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಗಮಿಸಬೇಕೆಂದು ಪರಿಷತ್ತಿನ ತಾಲೂಕು ಅದ್ಯಕ್ಷರಾದ ಶಾರದಾ ಗುರುಮೂರ್ತಿ ಹಾಗೂ ಪದಾಧಿಕಾರಿಗಳು ಅವರ ಮನೆಗೆ ತೆರಳಿ ಶಾಲು ಏಲಕ್ಕಿ ಹಾರ ಮೈಸೂರು ಪೇಟೆ ಹಾಕುವ ಮೂಲಕ ಆತ್ಮೀಯವಾಗಿ ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಕಸಾಪ ಕಾರ್ಯದರ್ಶಿ ಯೋಗೀಶ್, ಮೀನಾಕ್ಷಿ, ಪತ್ರಕರ್ತರ ಸಂಘದ ಮಾಜಿ ಅದ್ಯಕ್ಷರಾದ ಅರುಣ್ ರಕ್ಷಿದಿ, ರವಿಕುಮಾರ್, ನಿರ್ವಾಣಯ್ಯ, ನಲ್ಲುಲಿ ಸತೀಶ್ ,ರಾಕೇಶ್ ಮೆನೇಜಸ್, ಪಿಡಿಓ ಗಿರೀಶ್, ಕ್ಯಾಮನಹಳ್ಳಿ ರಾಜ್‌ಕುಮಾರ್, ಸ.ಸು.ವಿಶ್ವನಾಥ್, ಚೇತನ್, ಜಗದೀಶ್, ಪ್ರಸಾದ್ ರಕ್ಷಿದಿ ಅವರ ಪತ್ನಿ ರಾಧ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *