
ಸಕಲೇಶಪುರ : ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಸತಿಗಾಲ ಗ್ರಾಮದ ಬಸ್ ಸ್ಟಾಪ್ ಪಕ್ಕದಲ್ಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕಾರ್ತಿಕ ಪೂಜಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ 15/ 11 /2024 ರಂದು ತುಂಬಾ ವಿಜೃಂಭಣೆಯಿಂದ ನೆರವೇರಲಿದೆ
ಬೆಳಗ್ಗೆ 7:30 ರಿಂದ ಅಭಿಷೇಕ, ಹೋಮ, ಪೂಜಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1: 30 ರಿಂದ 3:00 ಗಂಟೆ ವರೆಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನೆರವೆರಲಿದೆ
ಭಕ್ತಾದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅರ್ಚಕರಾದ ಮಂಜುನಾಥ್ ಮನವಿ ಮಾಡಿಕೊಂಡಿರುತ್ತಾರೆ.

